Advertisement
ಏರ್ ಇಂಡಿಯಾ ವಿಮಾನವು ಕ್ಯಾಲಿಕಟ್‌ನ ಕರಿಪುರ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.44 ರ ಸುಮಾರಿಗೆ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಅದರಂತೆ ಪೈಲೆಟ್ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು.ಆದರೆ ವಿಮಾನ ಭೂ ಸ್ಪರ್ಶ ಮಾಡುವ ಮೊದಲು ವಿಮಾನದಲ್ಲಿದ್ದ ಹೆಚ್ಚಿನ ಇಂಧನವನ್ನು ಅರೇಬಿಯನ್ ಸಮುದ್ರಕ್ಕೆ ಸುರಿಸಲಾಗಿತ್ತು ಬಳಿಕ ಭೂಸ್ಪರ್ಶ ಮಾಡಲಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಕೋಝಿಕೋಡ್ ನಿಂದ ವಿಮಾನ ಟೇಕ್ ಆಫ್ ಆಗುವ ವೇಳೆ ವಿಮಾನದ ಹಿಂಭಾಗ ರನ್ ವೇಗೆ ಸ್ಪಷವಾಗಿದೆ ಎಂದು ಹೇಳಲಾಗಿದ್ದು ಇದರಿಂದಲೇ ತಾಂತ್ರಿಕ ದೋಷ ಕಂಡುಬಂದಿರಬಹುದು ಎಂದು ಹೇಳಲಾಗಿದೆ ಅದರಂತೆ ಭೂ ಸ್ಪರ್ಶ ಮಾಡುವ ವೇಳೆ ಹೆಚ್ಚಿನ ಅವಘಡ ಸಂಭವಿಸುವ ಮುನ್ನೆಚ್ಚರಿಕೆಯಿಂದಾಗಿ ವಿಮಾನದಲ್ಲಿದ್ದ ಹೆಚ್ಚಿನ ಇಂಧನವನ್ನು ಸಮುದ್ರಕ್ಕೆ ಸುರಿಯಲಾಗಿದೆ ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ:
ತಾಂತ್ರಿಕ ದೋಷ ಕಂಡುಬಂದ ಕೂಡಲೇ ವಿಮಾನದ ಪೈಲೆಟ್ ವಿಮಾನಯಾನ ಸಂಸ್ಥೆಗೆ ಮಾಹಿತಿ ನೀಡಿದ್ದು ಕೂಡಲೇ ಹತ್ತಿರದ ವಿಮಾನ ನಿಲ್ದಾಣವಾದ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಲಾಗಿದೆ ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲಾ ತುರ್ತು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು, ಒಂದು ವೇಳೆ ಭೂಸ್ಪರ್ಶವಾಗುವ ಸಂದರ್ಭದಲ್ಲಿ ಬೆಂಕಿ ಅನಾಹುತ ಏನಾದರು ಸಂಭವಿಸಿದರೆ ಅದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು, ಅದರಂತೆ ಮುನ್ನೆಚ್ಚರಿಕೆ ವಹಿಸಿದ ಪೈಲೆಟ್ ವಿಮಾನದಲ್ಲಿದ್ದ ಹೆಚ್ಚುವರಿ ಇಂಧನವನ್ನು ಸಮುದ್ರಕ್ಕೆ ಸುರಿದಿದ್ದಾರೆ, ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲದೆ ವಿಮಾನ ಭೂಸ್ಪರ್ಶವಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
Related Articles
Advertisement