Advertisement

ಬಾಕಿ ಪಾವತಿಸದೆ ಟಿಕೆಟ್‌ ನೀಡಲ್ಲ ; ಕೇಂದ್ರದ ಸಂಸ್ಥೆಗಳಿಗೆ ಏರ್‌ ಇಂಡಿಯಾ ಖಡಕ್‌ ಸೂಚನೆ

09:55 AM Dec 28, 2019 | Hari Prasad |

ಮುಂಬಯಿ: ನಷ್ಟದಲ್ಲಿರುವ ಕೇಂದ್ರ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ, ಅತ್ಯಂತ ಕಠಿನಕ್ರಮ ತೆಗೆದುಕೊಂಡಿದೆ. 10 ಲಕ್ಷ ರೂ.ಗಿಂತ ಹೆಚ್ಚು ಹಣ ಬಾಕಿಯುಳಿಸಿಕೊಂಡಿರುವ ಪ್ರಮುಖ ಸರಕಾರಿ ಸಂಸ್ಥೆಗಳಿಗೆ ಟಿಕೆಟ್‌ ನೀಡುವುದಿಲ್ಲವೆಂದು ಪ್ರಕಟಿಸಿದೆ. ಸಿಬಿಐ, ಐಬಿ, ಜಾರಿ ನಿರ್ದೇಶನಾಲಯ, ಕೇಂದ್ರ ಕಾರ್ಮಿಕ ಸಂಸ್ಥೆ (ಸಿಎಲ್‌ಐ), ಇಂಡಿಯನ್‌ ಆಡಿಟ್‌ ಬ್ಯೂರೊ (ಭಾರತೀಯ ಲೆಕ್ಕಪತ್ರ ಮಂಡಳಿ), ಬಿಎಸ್‌ಎಫ್ನಂತಹ ಪ್ರಮುಖ ಸರಕಾರಿ ಸಂಸ್ಥೆಗಳೂ ಏರ್‌ಇಂಡಿಯಾಕ್ಕೆ ಹಣ ನೀಡದೇ ಬಾಕಿಯುಳಿಸಿಕೊಂಡಿವೆ!

Advertisement

ಇದೇ ಮೊದಲಬಾರಿ ಇಂತಹ ಸಂಸ್ಥೆಗಳಿಗೆ ಹಣ ನೀಡದೇ ಟಿಕೆಟ್‌ ನೀಡುವು ದಿಲ್ಲ ವೆಂದು ಏರ್‌ ಇಂಡಿಯಾ ಕಡ್ಡಿಮುರಿದಂತೆ ಹೇಳಿದೆ. ಸದ್ಯ ಒಟ್ಟಾರೆ ದೇಶದ ಸರಕಾರಿ ಸಂಸ್ಥೆಗಳಿಂದ ಏರ್‌ ಇಂಡಿಯಾಕ್ಕೆ ಬರಬೇಕಿ ರುವ ಬಾಕಿ ಮೊತ್ತ 268 ಕೋಟಿ ರೂ. ಈ ಪೈಕಿ 50 ಕೋಟಿ ರೂ.ಗಳನ್ನು ಕಳೆದ ಕೆಲವು ವಾರಗಳಲ್ಲಿ ಏರ್‌ ಇಂಡಿಯಾ ಮರಳಿ ಪಡೆದುಕೊಂಡಿದೆ.

ಇನ್ನೂ ಬಾಕಿಯುಳಿಸಿ ಕೊಂಡಿರುವ ಸಂಸ್ಥೆಗಳ ಪಟ್ಟಿ ತಯಾರಿಸಿದೆ. ಕೇಂದ್ರಸರಕಾರದ ನಿಯಮಗಳ ಪ್ರಕಾರ, ವಿಮಾನ ಯಾನ ಮಾಡುವಾಗ ಸರಕಾರಿ ಸಂಸ್ಥೆಗಳ ಮೊದಲ ಆದ್ಯತೆ ಏರ್‌ ಇಂಡಿಯಾ ಆಗಿರಬೇಕು. ಒಂದು ವೇಳೆ ಏರ್‌ ಇಂಡಿಯಾ ಆ ಜಾಗಕ್ಕೆ ತಲುಪದಿದ್ದರೆ ಮಾತ್ರ, ಬೇರೆ ವಿಮಾನದಲ್ಲಿ ಆಸನ ಕಾಯ್ದಿರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next