ಸೂರತ್ : ಬಹುಜನರ ಬೇಡಿಕೆಯ ಮೇರೆಗೆ ಸೂರತ್‌ನಿಂದ ದುಬೈಗೆ ಎಕ್ಸ್‌ಪ್ರೆಸ್ ವಿಮಾನಯಾನ ಸೇವೆಯನ್ನು ಏರ್‌ಇಂಡಿಯಾ ಮೇ 15 ರಿಂದ ಆರಂಭಿಸುತ್ತಿದೆ.
189 ಸೀಟ್‌ಗಳುಳ್ಳ ಅಂತರಾಷ್ಟೀಯ ಮಟ್ಟದ ಹಾರಟ ವಿಮಾನವಾಗಿರುವ ಬೊಯಿಂಗ್737-800 ಈ ಮಾರ್ಗಣದಲ್ಲಿ ಸಂಚರಿಸಲಿದೆ.
ದುಬೈಗೆ ನೇರ ವಿಮಾನ ಹಾರಟಕ್ಕೆ ಅನುಮತಿ ದೊರಕಿದ್ದು, ಮೇ 15 ರಿಂದ ವಾರಕ್ಕೆ 3 ಬಾರಿ ಸಂಚರಿಸಲಿದೆ ಎಂದು ಏರ್‌ಇಂಡಿಯಾ ವಕ್ತಾರರು ಟ್ವಿಟ್ ಮಾಡಿದ್ದಾರೆ.
ವಿಮಾನದಲ್ಲಿ 50 ರಿಂದ 60 ಶೇಕಡಾ ಸೀಟುಗಳು ಭರ್ತಿಯಾಗುವುದನ್ನು ಏರ್ ಇಂಡಿಯಾ ನಿರೀಕ್ಷಿಸುತ್ತಿದೆ. ದೇಶಿಯ ಮಟ್ಟದಲ್ಲೂ ಸೂರತ್‌ನಿಂದ ವಿವಿಧ ಕಡೆಗಳಿಗೆ ಇನ್ನಷ್ಟು ವಿಮಾನಗಳನ್ನು ಹಾರಟ ಮಾಡುವ ಯೋಚನೆಯೂ ಏರ್ ಇಂಡಿಯಾ ಮುಂದಿದೆ.
ಮುಂಬಯಿ ,ಕೋಲ್ಕತಾ,ಬೆಂಗಳೂರು,ಚೆನ್ನೈ ಮತ್ತು ವಾರಣಾಸಿಗೆ ವಿಮಾನಯಾನ ಸೇವೆ ಒದಗಿಸಲು ನಿರ್ಧರಿಸಿದೆ ಮಾತ್ರವಲ್ಲದೆ 15 ದೇಶಗಳಿಗೆ ನೇರ ವಿಮಾನ ಸೇವೆಗೆ ಮನವಿ ಸಲ್ಲಿಸಿದೆ.
ಗುಜರಾತ್‌ನ ಇಬ್ಬರು ಸಂಸದರಾದ ದರ್ಶನಾ ಜರ್ದೋಶ್ ಮತ್ತು ಸಿ.ಆರ್.ಪಾಟೀಲ್ ಅವರು ಏರ್‌ಇಂಡಿಯಾ ಸಿಎಮ್‌ಡಿ ಅಶ್ವನಿ ಲೋಹಾನಿ ಅವರನ್ನು ಭೇಟಿಯಾಗಿ ಸೂರತ್‌ನಿಂದ ಹೆಚ್ಚು ವಿಮಾನಗಳ ಸೇವೆ ನೀಡುವಂತೆ ಕೋರಿದ್ದಾರೆ.