Advertisement

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

09:32 PM Oct 11, 2024 | Team Udayavani |

ತಿರುಚಿರಾಪಳ್ಳಿ : ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಟೇಕ್ ಆಫ್ ಆದ ಗಂಟೆಗಳ ನಂತರ ವಾಯು ಮಾರಾಗದಲ್ಲಿ ತಾಂತ್ರಿಕ ಅಡಚಣೆಗೆ ಸಿಲುಕಿ ತಮಿಳುನಾಡಿನ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶುಕ್ರವಾರ ಸಂಜೆ(ಅ11) ನಡೆದಿದ್ದು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿ ಹೋಗಿದೆ.

Advertisement

ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ತಿರುಚಿ ವಾಯುಪ್ರದೇಶದ ಮೇಲೆ ಕೆಲ ಕಾಲ ಹಾರಾಟ ನಡೆಸಿತು ಎಂದು ತಿಳಿದು ಬಂದಿದೆ.

ಪೈಲಟ್ ಸಮಯಪ್ರಜ್ಞೆ
ವಿಮಾನವು 140 ಪ್ರಯಾಣಿಕರನ್ನು ಹೊತ್ತಿತ್ತು, ಸಂಜೆ 5.43 ಕ್ಕೆ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ಹೊರಟಿತ್ತು. ಆದರೆ ಕೂಡಲೇ ತಾಂತ್ರಿಕ ದೋಷವನ್ನು ಕಂಡಿತು. ವಿಮಾನ ನಿಲ್ದಾಣದ ನಿರ್ದೇಶಕರ ಪ್ರಕಾರ, ಪೈಲಟ್ ಹೈಡ್ರಾಲಿಕ್ ವೈಫಲ್ಯದ ಬಗ್ಗೆ ಏರ್ ಸ್ಟೇಷನ್‌ಗೆ ತತ್ ಕ್ಷಣ ಮಾಹಿತಿ ನೀಡಿದರು ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅವಘಡ ತಪ್ಪಿ ಹೋಗಿದೆ. ವಿಮಾನವು ಏರ್‌ಸ್ಟ್ರಿಪ್‌ನಲ್ಲಿ ಇಳಿಯುತ್ತಿದ್ದಂತೆ ಜನರು ಹರ್ಷೋದ್ಗಾರ ಮಾಡುವ ವಿಮಾನ ನಿಲ್ದಾಣದ ವಿಡಿಯೋಗಳು ಹರಿದಾಡುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಆಂಬ್ಯುಲೆನ್ಸ್‌ಗಳು ಮತ್ತು ರಕ್ಷಣ ತಂಡಗಳನ್ನು ವಿಮಾನ ನಿಲ್ದಾಣದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.

ಲ್ಯಾಂಡಿಂಗ್ ಗೇರ್, ಬ್ರೇಕ್‌ಗಳು ಮತ್ತು ಫ್ಲಾಪ್‌ಗಳಂತಹ ಪ್ರಮುಖ ಭಾಗಗಳನ್ನು ನಿಯಂತ್ರಿಸಲು ಬಳಸುವ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯ ಸಂಭವಿಸುತ್ತದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಕ್ಯಾಪ್ಟನ್ ಮತ್ತು ಸಿಬಂದಿ ಗಳನ್ನು ಶ್ಲಾಘಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next