Advertisement

ಏರಿಂಡಿಯಾ ಉದ್ಯೋಗಿಗೆ ಲೈಂಗಿಕ ಕಿರುಕುಳ: ತನಿಖೆಗೆ ಸಚಿವ ಪ್ರಭು ಆದೇಶ

05:05 PM May 29, 2018 | Team Udayavani |

ಹೊಸದಿಲ್ಲಿ : ಏರಿಂಡಿಯಾ ವಿಮಾನ ಸಂಸ್ಥೆಯ ಹಿರಿಯ ಎಕ್ಸಿಕ್ಯುಟಿವ್‌ ವಿರುದ್ಧ  ಏರ್‌ ಹೋಸ್ಟೆಸ್‌ ಒಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕಳೆದ ಆರು ವರ್ಷಗಳಿಂದ ಆತ ನನ್ನನ್ನು ಲೈಂಗಿಕವಾಗಿ ಸತಾಯಿಸುತ್ತಿದ್ದಾನೆ; ಹಿಂಸೆ, ತಾರತಮ್ಯ ಎಸಗುತ್ತಿದ್ದಾನೆ ಎಂದಾಕೆ ದೂರಿದ್ದಾರೆ. ಸಂತ್ರಸ್ತ ಏರ್‌ ಹೋಸ್ಟೆಸ್‌ ಕೆಲವು ದಶಕಗಳಿಂದ ಏರಿಂಡಿಯಾದಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ. 

Advertisement

‘ನಾನು ಅನುಭವಿಸುತ್ತಿರುವ ಪಾಡನ್ನು ನನ್ನ ಮಹಿಳಾ ಸಹೋದ್ಯೋಗಿಗಳು ಕೂಡ ಅನುಭವಿಸುತ್ತಿದ್ದಾರೆ’ ಎಂದಾಕೆ ತನ್ನ ದೂರಿನಲ್ಲಿ ಹೇಳಿದ್ದಾರೆ. 

ಕೇಂದ್ರ ನಾಗರಿಕ ವಾಯು ಯಾನ ಸಚಿವ ಸುರೇಶ್‌ ಪ್ರಭು ಅವರು ಈ ಆರೋಪದ ಬಗ್ಗೆ ಕೂಡಲೇ ತನಿಖೆ ನಡೆಸುವಂತೆ  ಆದೇಶಿಸಿದ್ದಾರೆ. 

ತಮ್ಮ ಆದೇಶದ ಬಗ್ಗೆ ಟ್ವೀಟ್‌ ಮಾಡಿರುವ ಸಚಿವ ಸುರೇಶ್‌ ಪ್ರಭು ಅವರು, “ಏರಿಂಡಿಯಾ ಸಿಎಂಡಿ ಗೆ ಈ ಬಗ್ಗೆ ಕೂಡಲೇ ತನಿಖೆ ನಡೆಸುವಂತೆ ಸೂಚಿಸಿದ್ದೇನೆ; ಅವಶ್ಯವಿದ್ದರೆ ಇನ್ನೊಂದು ಸಮಿತಿಯನ್ನು ರಚಿಸುತ್ತೇನೆ’ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next