ನವದೆಹಲಿ: ಕೊರೊನಾ ವೈರಸ್ ನಿಂದ ತತ್ತರಿಸಿ ಹೋಗಿರುವ ಚೀನಾದ ವುಹಾನ್ ನಿಂದ 600 ಮಂದಿ ಭಾರತೀಯರನ್ನು ಸ್ವದೇಶಕ್ಕೆ ಸ್ಥಳಾಂತರಿಸಲು ತೆರಳಿದ್ದ ಎರಡು ಏರ್ ಇಂಡಿಯಾ ವಿಶೇಷ ವಿಮಾನಗಳ ಸಿಬ್ಬಂದಿಗಳನ್ನು ಒಂದು ವಾರದ ರಜೆ ನೀಡಿ ಕಳುಹಿಸಲಾಗಿದೆ ಏರ್ ಇಂಡಿಯಾ ವಕ್ತಾರ ತಿಳಿಸಿದ್ದಾರೆ.
ಮಾರಣಾಂತಿಕ ಕೊರೊನಾ ವೈರಸ್ ನ ತವರಾದ ಚೀನಾದ ವುಹಾನ್ ನಿಂದ ಭಾರತದ ಎರಡು ವಿಶೇಷ ವಿಮಾನಗಳು ಸುಮಾರು 647 ಭಾರತೀಯರು ಹಾಗೂ ಏಳು ಮಂದಿ ಮಾಲ್ಡೀವ್ಸ್ ಜನರನ್ನು ಭಾರತಕ್ಕೆ ಕರೆ ತರಲಾಗಿತ್ತು ಎಂದು ವರದಿ ತಿಳಿಸಿದೆ.
ವುಹಾನ್ ನಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಏರ್ ಇಂಡಿಯಾದ 64 ಮಂದಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇದರಲ್ಲಿ 30 ಮಂದಿ ಕ್ಯಾಬಿನ್ ಸಿಬ್ಬಂದಿ, 8 ಪೈಲಟ್ಸ್, 10 ಮಂದಿ ವಾಣಿಜ್ಯ ಸಿಬ್ಬಂದಿ ಹಾಗೂ ಒಬ್ಬರು ಏರ್ ಇಂಡಿಯಾದ ಹಿರಿಯ ಅಧಿಕಾರಿ ಭಾಗವಹಿಸಿದ್ದರು ಎಂದು ವಕ್ತಾರರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.