Advertisement

ಐಸಿಸ್‌ ಜತೆ ನಂಟು: ಗಗನಸಖೀ ಬಂಧನ

06:50 AM Oct 28, 2017 | Team Udayavani |

ಅಹ್ಮದಾಬಾದ್‌: ಐಸಿಸ್‌ ಉಗ್ರರ ಜತೆ ಕೈಜೋಡಿಸಿ ಅಹ್ಮದಾಬಾದ್‌ನಲ್ಲಿರುವ ಯಹೂದಿಗಳ ದೇಗುಲವೊಂದನ್ನು ಸ್ಫೋಟಿಸುವ ಷಡ್ಯಂತ್ರ ರೂಪಿಸಿದ್ದ ಆರೋಪದ ಮೇರೆಗೆ ಗಗನಸಖೀಯೊಬ್ಬಳನ್ನು ಗುಜರಾತ್‌ನ ಉಗ್ರ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ. ಸದ್ಯಕ್ಕೆ ಆಕೆಯ ಹೆಸರನ್ನು ಗೌಪ್ಯವಾಗಿಡಲಾಗಿದೆ. 

Advertisement

ಐಸಿಸ್‌ನ ಕೆಲ ಉಗ್ರರು ಭಾರತದಲ್ಲಿ ಚಿನ್ನದ ಕಳ್ಳಸಾಗಣೆ ನಡೆಸಲೂ ಆಕೆ ನೆರವು ನೀಡು ತ್ತಿದ್ದಳೆಂದು ಆರೋಪಿಸಲಾಗಿದೆ. ಈ ಕುಕೃತ್ಯಗಳಿಗೆ ನೆರವು ನೀಡುತ್ತಿದ್ದ ಆಕೆಯ ಸಹವರ್ತಿ, ಸೂರತ್‌ ಮೂಲದ ಕ್ರಿಮಿನಲ್‌ ವಕೀಲ ಉಬೈದ್‌ ಮಿರ್ಜಾ, ಆತನ ಆಪ್ತ , ಲ್ಯಾಬ್‌ ಟೆಕ್ನೀಷಿಯನ್‌ ಆಗಿ ಕಾರ್ಯ ನಿರ್ವಹಿ ಸುತ್ತಿದ್ದ ಕಾಸೀಮ್‌ ಸ್ಟಿಂಬರ್‌ವಾಲಾ ಎಂಬಾತನನ್ನೂ ಬಂಧಿಸಲಾಗಿದೆ.

ಇತ್ತೀಚೆಗೆ, ಉಬೈದ್‌ ಮಿರ್ಜಾ, ತಮಿಳುನಾಡಿನ ವ್ಯಕ್ತಿಯೊಬ್ಬನ ಜತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸುತ್ತಾ, ತಾನು ತಮ್ಮ ಸ್ನೇಹಿತೆ ಗಗನ ಸಖೀಯ ಮೂಲಕ ಭಾರತಕ್ಕೆ ತರಿಸಿರುವ ಚಿನ್ನವನ್ನು ತಮಿಳುನಾಡಿಗೆ ಕಳುಹಿಸುವುದಾಗಿ ತಿಳಿಸಿದ. ಅಲ್ಲದೆ, ತಮ್ಮ ಮಾಲು ಮುಂಬೈ ಕಡೆಗೂ ರವಾನಿಸಬೇಕಿದೆ ಎಂದು ಸೂಚಿಸಿದ್ದ. ಈ ಕರೆಯನ್ನು ಟ್ರಾಪ್‌ ಮಾಡಿದ ಪೊಲೀಸರು,  ಉಬೈದ್‌ ಹಾಗೂ ಆತನ ಸಹಚರನನ್ನು, ಗಗನಸಖೀಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next