ಲೇಹ್: ತಾಂತ್ರಿಕ ಕಾರಣದಿಂದ ಭಾರತೀಯ ವಾಯುಪಡೆಗೆ ಸೇರಿದ ಸಾರಿಗೆ ವಿಮಾನ ಸಿ-17 ಗ್ಲೋಬ್‌ಮಾಸ್ಟರ್ ಹಾರಾಟ ನಡೆಸಲು ಸಾಧ್ಯವಾಗದೆ ರನ್ ವೇ ಯಲ್ಲೇ ನಿಂತ ಪರಿಣಾಮ ಕೇಂದ್ರಾಡಳಿತ ಪ್ರದೇಶ ಲಡಾಕ್ ರಾಜಧಾನಿ ಲೇಹ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಗಳ ಹಾರಾಟಕ್ಕೆ ಅಡ್ಡಿಯುಂಟಾಗಿದೆ.
ದೈತ್ಯ ವಿಮಾನ ರನ್ ವೇಯಲ್ಲೆ ನಿಂತ ಪರಿಣಾಮ ಇಲ್ಲಿ ಹಾರಟ ನಡೆಸಬೇಕಿದ್ದ ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್, ವಿಸ್ತಾರ ಸಂಸ್ಥೆಗಳ ವಿಮಾನಗಳು ತಮ್ಮ ಸಂಚಾರವನ್ನು ರದ್ದುಗೊಳಿಸಿದ್ದು ಕೆಲವೊಂದು ವಿಮಾನಗಳು ಇತರ ನಿಲ್ದಾಣಕ್ಕೆ ಸಂಚಾರವನ್ನು ಬದಲಾಯಿಸಿಕೊಂಡಿವೆ ಎನ್ನಲಾಗಿದೆ.
ತಂತ್ರಜ್ಞರ ತಂಡ ಶ್ರಮಿಸುತ್ತಿದ್ದು ಶೀಘ್ರದಲ್ಲಿ ನಾಗರಿಕ ವಿಮಾನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: West Bengal: ಅಕ್ರಮ ಪಟಾಕಿ ಘಟಕದಲ್ಲಿ ಸ್ಫೋಟ; ಏಳು ಮಂದಿ ಮೃತ್ಯು; ಹಲವರಿಗೆ ಗಾಯ