Advertisement

ವಾಯುಪಡೆಗೆ ಅಪಾಚೆ ಬಲ

09:17 AM May 13, 2019 | mahesh |

ಹೊಸದಿಲ್ಲಿ: ಅಮೆರಿಕದಲ್ಲಿ ತಯಾರಾಗಿ ಭಾರತಕ್ಕೆ ಬರಬೇಕಿರುವ 22 ಅಪಾಚೆ ಗಾರ್ಡಿಯನ್‌ ಹೆಲಿಕಾಪ್ಟರ್‌ಗಳ ಸರಣಿಯ ಮೊದಲ ಕಾಪ್ಟರ್‌ ಶನಿವಾರ ಭಾರತೀಯ ವಾಯುಪಡೆ (ಐಎಎಫ್)ಗೆ ಅಧಿಕೃತವಾಗಿ ಹಸ್ತಾಂತರಗೊಂಡಿದೆ. ಅಮೆರಿಕದ ಅರಿಜೋನಾದ ಮೆಸಾ ಪ್ರಾಂತ್ಯದಲ್ಲಿ ರುವ ಬೋಯಿಂಗ್‌ ವಿಮಾನ ತಯಾರಿಕಾ ಘಟಕದಲ್ಲಿ ಎಎಚ್‌-64ಇ (ಐ) ಹೆಲಿ ಕಾಪ್ಟರನ್ನು ಬೋಯಿಂಗ್‌ ಅಧಿಕಾರಿಗಳು, ಐಎಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಉಳಿದ ಕಾಪ್ಟರ್‌ಗಳು 2020ರೊಳಗೆ ಭಾರ ತೀಯ ವಾಯುಪಡೆಯನ್ನು ಸೇರಿಕೊಳ್ಳಲಿವೆ.

Advertisement

ಭಾರತೀಯ ವಾಯುಪಡೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಈ ವರೆಗಿನ ಎಲ್ಲ ದಾಳಿಕೋರ ಹೆಲಿಕಾಪ್ಟರ್‌ಗಳನ್ನೂ ಮೀರಿಸುವ ತಂತ್ರಜ್ಞಾನ ಹೊಂದಿರುವ ಅಪಾಚೆ ಗಾರ್ಡಿಯನ್‌, ಐಎಎಫ್ ಬಲವನ್ನೂ ಅಗಾಧವಾಗಿ ಹೆಚ್ಚಿಸ ಲಿದೆ ಎಂದು ನಿರೀಕ್ಷಿಸಲಾಗಿದೆ.

ಹೆಲಿಕಾಪ್ಟರ್‌ನ ಅಧಿಕೃತ ಹಸ್ತಾಂತರದ ಫೋಟೋಗಳನ್ನು ಐಎಎಫ್ ತನ್ನ ಟ್ವಿಟರ್‌ ಖಾತೆಯ ಮೂಲಕ ಪ್ರಕಟಿಸಿದೆ. ಈ ಬಗ್ಗೆ ವಿವರಣೆ ನೀಡಿರುವ ಐಎಎಫ್ ವಕ್ತಾರ ಮತ್ತು ಗ್ರೂಪ್‌ ಕ್ಯಾಪ್ಟನ್‌ ಅನುಪಮ್‌ ಬ್ಯಾನರ್ಜಿ, “ಮೂರೂವರೆ ವರ್ಷಗಳ ಹಿಂದೆ, ಈ ಮಾದರಿಯ 22 ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ನೀಡುವ ಬಗ್ಗೆ ಉಭಯ ದೇಶಗಳು 4,138 ಕೋಟಿ ರೂ. ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಿದ್ದವು. ಈಗ ಮೊದಲ ಹೆಲಿಕಾಪ್ಟರ್‌ ಹಸ್ತಾಂತರಗೊಂಡಿದೆ’ ಎಂದು ಹೇಳಿದ್ದಾರೆ.

ಐಎಎಫ್ನ ಆಯ್ದ ಸಿಬಂದಿಗೆ ಹೆಲಿಕಾಪ್ಟರ್‌ ನಿಭಾವಣೆಗೆ ಅಲಾಬಾಮದ ಫೋರ್ಟ್‌ ರೂಕರ್‌ನಲ್ಲಿ ಬೋಯಿಂಗ್‌ ಸಂಸ್ಥೆಯಿಂದಲೇ ತರಬೇತಿ ನೀಡಲಾಗಿದೆ.

ಏನಿದರ ವಿಶೇಷ?
ಐಎಎಫ್ನ ಮುಂದಿನ ಆವಶ್ಯಕತೆಗಳಿಗೆ ತಕ್ಕಂತೆ ರೂಪು
ಈವರೆಗಿನ ದಾಳಿಕೋರ ಕಾಪ್ಟರ್‌ಗಳಲ್ಲೇ ಅತ್ಯಾಧುನಿಕ
ಕ್ರಾಶ್‌ ರೆಸಿಸ್ಟೆಟ್‌(ಪತನ ಪ್ರತಿರೋಧಕ) ಆಸನ ವ್ಯವಸ್ಥೆ
ಪೈಲಟ್‌, ಗನ್ನರ್‌ಗಳ ಹೆಲ್ಮೆಟ್‌ ಗಾಜಿನಲ್ಲೇ ಗುರಿ ನಿಯೋಜಿಸುವ ತಂತ್ರಗಾರಿಕೆ ಅಳವಡಿಕೆ
ಏಕಕಾಲಕ್ಕೆ 4ಏರ್‌-ಟು-ಏರ್‌ ಕ್ಷಿಪಣಿ ಉಡಾವಣೆ ಕ್ಷಮತೆ
12.7 ಎಂಎಂ ಕ್ಯಾಲಿಬರ್‌ ಗನ್‌ಗಳ ಗುಂಡಿನ ದಾಳಿಯನ್ನು ತಡೆಯುವ ಸಾಮರ್ಥ್ಯ
ರೆಕ್ಕೆಗಳಿಗೆ 23 ಎಂಎಂ ಗನ್‌ಗಳ ಗುಂಡು ತಡೆವ ಸಾಮರ್ಥ್ಯ
ಹಗಲು, ರಾತ್ರಿ, ಮಳೆ, ಬಿಸಿಲುಗಳಲ್ಲಿ ಕಾರ್ಯಾಚರಣೆ
ಪ್ರತಿಕೂಲ ವಾತಾವರಣದಲ್ಲೂ ಹಾರಾಡುವ ಛಾತಿ
ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲೂ ಸರಾಗ ಹಾರಾಟ

Advertisement

ಸಾಮರ್ಥ್ಯ
“30 ಎಂಎಂ’ನ ,200 ರೌಂಡ್‌ಗಳ ಎಂ230 ಕೆನಾನ್‌
ಅಗತ್ಯಕ್ಕೆ ತಕ್ಕಷ್ಟು ಏರ್‌-ಟು-ಏರ್‌ ಮಾದರಿಯ ಕ್ಷಿಪಣಿಗಳು
16 ಎಜಿಎಂ – 114
ಆರ್‌ ಹೆಲ್‌ಫೈರ್‌ 2 ಮಾದರಿಯ ಟ್ಯಾಂಕರ್‌ ನಾಶ ಕ್ಷಿಪಣಿ
ಏಮ್‌ 9 ಸೈಡ್‌ವಿಂಗರ್‌ ಮತ್ತು ಏಮ್‌ 92 ವಿಂಗರ್‌ ಅಥವಾ ನಾಲ್ಕು ಮಿಸ್ಟ್ರಲ್‌ ಮಾದರಿ ಕ್ಷಿಪಣಿಗಳು
ಎದುರಾಳಿ ಕ್ಷಿಪಣಿ ಧ್ವಂಸಗೊಳಿಸಬಲ್ಲ ಎಜಿಎಂ 122 ಸುರಕ್ಷಾ ರೀತಿಯ ಕ್ಷಿಪಣಿಗಳು
19 ಶಾಟ್‌ಪಾಡ್‌ಗಳು

ನಿರೀಕ್ಷೆಯಲ್ಲಿ
ಇಂಡೋನೇಷ್ಯಾ (8)
ಕತಾರ್‌ (24)
ದಕ್ಷಿಣ ಕೊರಿಯಾ (36)
ಯುಎಇ (30)

ಎಲ್ಲೆಲ್ಲಿದೆ ?
ಅಮೆರಿಕ
ಇಸ್ರೇಲ್‌
ಈಜಿಪ್ಟ್
ನೆದರ್ಲೆಂಡ್‌

248 ಕೋಟಿ ಪ್ರತಿ ಅಪಾಚೆ ಕಾಪ್ಟರ್‌ನ ಅಂದಾಜು ಮೌಲ್ಯ
4,138 ಕೋಟಿ 22 ಅಪಾಚೆಗಳಿಗಾಗಿ ಭಾರತ-ಅಮೆರಿಕ ಒಪ್ಪಂದ
300 ಕಿ.ಮೀ. ಪ್ರತಿ ಗಂಟೆಗೆ ಹೆಲಿಕಾಪ್ಟರ್‌ ಸಾಗಬಲ್ಲ ಗರಿಷ್ಠ ವೇಗ
58 ಅಡಿ ಉದ್ದ
48 ಅಡಿ ಅಗಲ
16 ಅಡಿ ಕಾಪ್ಟರ್‌ನ ಒಟ್ಟು ಎತ್ತರ
5.17 ಟನ್‌ಖಾಲಿ ಇದ್ದಾಗ ಕಾಪ್ಟರ್‌ನ ತೂಕ
10.43 ಟನ್‌ ಹಾರಾಟದ ವೇಳೆ ಕಾಪ್ಟರ್‌ ತೂಕ

Advertisement

Udayavani is now on Telegram. Click here to join our channel and stay updated with the latest news.

Next