Advertisement
ಕೋವಿಡ್ ಕಾರಣಕ್ಕಾಗಿ ಪಿಲಿಕುಳದ ಪ್ರಾಣಿಗಳಿಗೆ ಕ್ವಾರಂಟೈನ್ ಇಲ್ಲ. ಬದಲಾಗಿ, ದೇಶದ ಬೇರೆ ಬೇರೆ ಮೃಗಾಲಯಗಳಿಂದ ಕರೆ ತರುವ ಪ್ರಾಣಿಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಪತ್ತೆ ಹಚ್ಚಲು ಪ್ರತ್ಯೇಕ ಕೋಣೆಯಲ್ಲಿರಿಸಿ ನಿಗಾ ವಹಿಸುವ ಕ್ವಾರಂಟೈನ್ ವ್ಯವಸ್ಥೆ ಇಲ್ಲಿದೆ.
ಬೇರೆ ಬೇರೆ ಮೃಗಾಲಯಗಳಿಂದ ತರಲಾಗುವ ಪ್ರಾಣಿ-ಪಕ್ಷಿ, ಹಾವನ್ನು ನೇರವಾಗಿ ಮೃಗಾಲಯದಲ್ಲಿ ಬಿಡುವ ಬದಲು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. 1ರಿಂದ 2 ತಿಂಗಳ ಬಳಿಕ ಯಾವುದೇ ರೋಗ ಲಕ್ಷಣ ಇಲ್ಲ ಎಂಬುದು ಗೊತ್ತಾದ ಬಳಿಕ ಅವುಗಳನ್ನು ಮೃಗಾಲಯದಲ್ಲಿ ಇತರ ಪ್ರಾಣಿಗಳ ಜತೆಗೆ ಬಿಡಲಾಗುತ್ತದೆ.
Related Articles
ಪಿಲಿಕುಳ ನಿಸರ್ಗಧಾಮದಲ್ಲಿ ಸದ್ಯ 20 ಸಿಸಿ ಕೆಮರಾಗಳ ಮೂಲಕ ನಿತ್ಯ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ. ಪ್ರಾಣಿಗಳ ಆವರಣ ಕೇಂದ್ರದ ಹೊರಗೆ/ಒಳಗೆ, ಪ್ರವಾಸಿಗರು ತಿರುಗಾಡುವ ಸ್ಥಳ ದಲ್ಲಿ ಸಿಸಿ ಕೆಮರಾ ಕಣ್ಗಾವಲು ಇರಲಿದೆ.
Advertisement
“ವಿವಿಧ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿ’ಪಿಲಿಕುಳಕ್ಕೆ ತರುವ ಎಲ್ಲ ಪ್ರಾಣಿ-ಪಕ್ಷಿಗಳನ್ನು ಆರೋಗ್ಯ ದೃಷ್ಟಿಯಿಂದ ಕ್ವಾರಂಟೈನ್ ಮಾಡಲಾ ಗುತ್ತಿದ್ದು, ಇದಕ್ಕಾಗಿ ಪಿಲಿಕುಳದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕ್ವಾರಂಟೈನ್ ಕೇಂದ್ರ ತೆರೆಯ ಲಾಗುತ್ತದೆ. ಜತೆಗೆ, ಇನ್ಕ್ಯುಬೇಟರ್, ರಕ್ತ ಪರೀಕ್ಷಾ ಕೇಂದ್ರ, ಸಿಸಿ ಕೆಮರಾ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಪಿಲಿಕುಳದಲ್ಲಿ ಕೈಗೊಳ್ಳಲಾಗುತ್ತಿದೆ.
ಎಚ್. ಜಯಪ್ರಕಾಶ್ ಭಂಡಾರಿ, ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ ಪ್ರಾಣಿಗಳ ರಕ್ತ ಪರೀಕ್ಷೆಗೆ ಪ್ರತ್ಯೇಕ ಘಟಕ
ಪಿಲಿಕುಳದ ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಎದುರಾದರೆ ಅಂತಹ ಪ್ರಾಣಿಗಳ ರಕ್ತದ ಮಾದರಿಯ ಪರೀಕ್ಷೆಯನ್ನು ಬೆಂಗಳೂರು-ಮಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ನಡೆಸಲಾಗುತ್ತಿದೆ. ಆದರೆ, ಇದೀಗ ಪಿಲಿಕುಳದಲ್ಲಿಯೇ ಪ್ರತ್ಯೇಕ ರಕ್ತ ಪರೀಕ್ಷಾ ಘಟಕ, ಇನ್ಕ್ಯುಬೇಟರ್ ಮತ್ತು ಮಾಂಸ ಶೇಖರಿಸಿಡುವ ಬೃಹತ್ ಶೀತಲೀಕರಣ ಘಟಕ ನಿರ್ಮಿಸಲು ನಿಸರ್ಗಧಾಮ ಆಡಳಿತ ಮಂಡಳಿ ನಿರ್ಧರಿಸಿದ್ದು, ಕಾಮಗಾರಿ ನಡೆಯುತ್ತಿದೆ.