Advertisement

ಶ್ವಾನದ ಮೇಲೆ ಹಲ್ಲೆಗೆ ಐಂದ್ರಿತಾ ಬೇಸರ

02:39 PM Dec 23, 2020 | Suhan S |

ಇತ್ತೀಚೆಗೆ ಮನೆಯಲ್ಲಿ ಸಾಕಿದ್ದ ನಾಯಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾಗಳಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಈ ದೃಶ್ಯಗಳನ್ನುಕಂಡಿರುವ ಪ್ರಾಣಿ ಪ್ರಿಯರು ಈ ಹಲ್ಲೆಯನ್ನು ಖಂಡಿಸುತ್ತಿದ್ದಾರೆ. ಇದೀಗ ಈ ಘಟನೆಕಂಡು ನಟಿ ಐಂದ್ರಿತಾಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇಅಲ್ಲದೆ ಶ್ವಾನದ ಮೇಲಿನಹಲ್ಲೆಯ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಐಂದ್ರಿತಾ ರೇ, “ಪ್ರಾಣಿಗಳ ಮೇಲೆ ನಡೆಯು ವಕ್ರೌರ್ಯ ವಿರುದ್ಧ ಕಠಿಣವಾದ ಕಾನೂನು ಇದ್ದಿದ್ದರೆ ಹೀಗೆ ನಡೆಯುತ್ತಿರಲಿಲ್ಲ. ಈ ಬಗ್ಗೆ ರಾಜಕಾರಣಿಗಳು ಯಾವುದೇ ನಿಲುವು ತೆಗೆದುಕೊಳ್ಳುವುದಿಲ್ಲ. ಯಾವುದೇ ಮಾದ್ಯಮಗಳು ಕೂಡ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಲಂಡನ್‌ ರಿಟರ್ನ್ ಹರ್ಷಿಕಾ ಮತ್ತು ಕ್ವಾರಂಟೈನ್‌ ಶಾಕ್‌!

ಅದಾ ಶರ್ಮಾ ಹಾಟ್‌ ಫೋಟೋಗಳು ವೈರಲ್‌ :

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ರಣ ವಿಕ್ರಮ’ ಚಿತ್ರದಲ್ಲಿ ನಾಯಕಿಯಾಗಿಕಾಣಿಸಿಕೊಂಡಿದ್ದ ಅದಾ ಶರ್ಮ ಅನೇಕರಿಗೆ ಗೊತ್ತಿರಬಹುದು. ಇನ್ನು ಅವಕಾಶ ಸಿಕ್ಕರೆ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸಲು ಸೈ ಎನ್ನುತ್ತಿದ್ದರೂ, ಅದಾಗೆ ಹೊಸ ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ. ಇವೆಲ್ಲದರ ನಡುವೆ ಅದಾ ಆಗಾಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲೂ ಬೇರೆ ಬೇರೆಕಾರಣಕ್ಕೆ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ಅದಾ ಶರ್ಮ ತಮ್ಮ ಹಾಟ್‌ ಪೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next