Advertisement

ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಗುರಿ

12:50 AM Jan 25, 2019 | Harsha Rao |

ಮಂಗಳೂರು: ಮಕ್ಕಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಮಹತ್ತರ ಜವಾಬ್ದಾರಿಯೊಂದಿಗೆ 2004ರಲ್ಲಿ ಆರಂಭವಾದ ವಿಬ್‌ಗಯಾರ್‌ ಸಮೂಹ ಶಾಲೆ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ನಡುವೆ ಪರಿಪೂರ್ಣ ಸಮತೋಲನ ನಿರ್ವಹಿಸಲು ಉತ್ತೇಜಿಸುತ್ತದೆ.

Advertisement

ವಿಬ್‌ಗಯಾರ್‌ ಅನುಸರಿಸುವ ಪಠ್ಯಕ್ರಮದ ಚೌಕಟ್ಟನ್ನು ಶೈಕ್ಷಣಿಕ ತಜ್ಞರ‌ ತಂಡ ಕೌಶಲಯುತವಾಗಿ ರೂಪಿಸಿದ್ದು, ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಕಲಿಕಾ ಅವಕಾಶಗಳನ್ನು ಗರಿಷ್ಠವಾಗಿ ಕಲ್ಪಿಸಿಕೊಡುವ ಗುರಿ ಹೊಂದಿದೆ.

ಸಿಬಿಎಸ್‌ಇ, ಸಿಐಎಸ್‌ಸಿಇ ಮತ್ತು ಸಿಎಐಇ ಸೇರಿದಂತೆ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಶೈಕ್ಷಣಿಕ ಮಂಡಳಿಯಿಂದ ಆಂಗೀಕೃತವಾದ ಗುಣಮಟ್ಟದ್ದಾಗಿದೆ.

ವಿಬ್‌ಗಯಾರ್‌ ಸಮೂಹದ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿ- ಶಿಕ್ಷಕ ಅನುಪಾತ 15:1ರಷ್ಟಿದೆ. ಇದು ವಿದ್ಯಾರ್ಥಿಗಳಿಗೆ ಬೋಧಕರ ಜತೆ ಸಂವಾದಾತ್ಮಕ ಬಂಧವನ್ನು ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ನೆರವಾಗುತ್ತದೆ.

ಪಠ್ಯೇತರ ಚಟುವಟಿಕೆ
ವಿಬ್‌ಗಯಾರ್‌ ಶಾಲೆಗಳ ಸಮೂಹ, ಕ್ರೀಡೆ ಮತ್ತು ಪ್ರದರ್ಶನ ಕಲೆಗಳಿಗೆ ಅವಕಾಶ ಮಾಡಿಕೊಡುವ ದೇಶದ ಏಕೈಕ ಶಾಲಾ ಸಮೂಹ ಎಂಬ ಹೆಗ್ಗಳಿಕೆ ಹೊಂದಿದೆ. ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಲು ಫುಟ್‌ಬಾಲ್‌, ಕ್ರಿಕೆಟ್‌, ಬಾಸ್ಕೆಟ್‌ ಬಾಲ್‌, ಸ್ಕೇಟಿಂಗ್‌, ನಾಟಕ ಮತ್ತಿತರ ಚಟುವಟಿಕೆಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ಮಕ್ಕಳು ವಾಸ್ತವ ಜಗತ್ತಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಅಗತ್ಯವಾದ ಸಾಮಾಜಿಕ ಕೌಶಲ ಗಳನ್ನು ಕೂಡ ವಿಬ್‌ಗಯಾರ್‌ ಕಲಿಸುತ್ತಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next