Advertisement
ರವಿವಾರ ದಿಲ್ಲಿಯಲ್ಲಿ ನಡೆದ ಮಂಡಳಿಯ ಎಲ್ಲ 40 ಮಂದಿ ಸದಸ್ಯರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಬಳಿಕ ಮಾತನಾಡಿದ ಮಂಡಳಿಯ ಕಾರ್ಯದರ್ಶ ಜಫರ್ಯಾಬ್ ಜಿಲಾನಿ, ‘ವಿಚ್ಛೇದನದ ಬಳಿಕವೂ ಪತ್ನಿಯನ್ನು ಮರುವಿವಾಹವಾಗಲು ಪತಿ ಬಯಸಿದರೆ, ಆಕೆಯು ಬೇರೊಬ್ಬನನ್ನು ಮದುವೆಯಾಗಿ ಆತನಿಗೆ ವಿಚ್ಛೇದನ ನೀಡಿದ ಬಳಿಕವೇ ಮೊದಲ ಪತಿಯನ್ನು ವರಿಸಬಹುದು. ಈ ಪ್ರಕ್ರಿಯೆಗೆ ನಿಕಾಹ್ ಹಲಾಲಾ ಎನ್ನುತ್ತೇವೆ. ಇದು ಕುರಾನ್ ನಲ್ಲೇ ಇರುವ ಕಾರಣ, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಈ ವಿಚಾರದಲ್ಲಿ ಭಿನ್ನಾಭಿಪ್ರಾಯವೂ ಇಲ್ಲ’ ಎಂದಿದ್ದಾರೆ.
ಭಾರತದ 10 ನಗರಗಳಲ್ಲಿ ಸದ್ಯವೇ ಶರಿಯಾ ಕೋರ್ಟ್ ಸ್ಥಾಪನೆಯಾಗಲಿದೆ ಎಂದು ಮಂಡಳಿ ಘೋಷಿಸಿದೆ. ಇದೇ 22ರಂದು ಸೂರತ್ ನಲ್ಲಿ, ಸೆ.9ರಂದು ಮಹಾರಾಷ್ಟ್ರದಲ್ಲಿ ಕೋರ್ಟ್ ಆರಂಭಿಸಲಾಗುವುದು. ಸಮುದಾಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇಲ್ಲೇ ಇತ್ಯರ್ಥಗೊಳಿಸಲಾಗುವುದು. ವಿವಾಹಕ್ಕೆ ಸಂಬಂಧಿಸಿದ ಮತ್ತು ಆಸ್ತಿ ವಿವಾದಗಳನ್ನೂ ಇಲ್ಲಿ ಬಗೆಹರಿಸಲಾಗುತ್ತದೆ. ಶರಿಯಾ ಕೋರ್ಟ್ ಅಸಾಂವಿಧಾನಿಕ ಅಲ್ಲ. ಶರಿಯಾ ಕೋರ್ಟ್‌ಗಳು ದೇಶದ ಸಂವಿಧಾನದಂತೆ ರಚಿತವಾದ ನ್ಯಾಯಾಲಯಗಳಿಗೆ ಪರ್ಯಾಯವಲ್ಲ ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ, ಇಲ್ಲಿ ಕಾನೂನುಬಾಹಿರ ಎಂಬ ಪ್ರಶ್ನೆಯೇ ಉದ್ಭವಿಸದು ಎಂದಿದ್ದಾರೆ ಜಿಲಾನಿ.