ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ 550 ಟನ್ ಸಾಮರ್ಥ್ಯದ “ಗೋಬರ್-ಧನ್’ ಜೈವಿಕ-ಸಿಎನ್‌ಜಿ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವರ್ಚುವಲ್ ಆಗಿ ಉದ್ಘಾಟಿಸಿದ್ದಾರೆ.
“ಗೋವರ್ಧನ್ ಸ್ಥಾವರ’ ಎಂಬ ಹೆಸರಿನ ಈ ಘಟಕವು “ತ್ಯಾಜ್ಯದಿಂದ ಸಂಪತ್ತು’ ಎಂಬ ಪರಿಕಲ್ಪನೆಯನ್ನು ಆಧರಿಸಿದೆ.
ಸ್ಥಾವರಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, “ಹಲವು ದಶಕಗಳಿಂದಲೂ ದೇಶದ ನಗರಗಳಲ್ಲಿ ಸಾವಿರಾರು ಎಕರೆ ಪ್ರದೇಶಗಳನ್ನು ಲಕ್ಷಗಟ್ಟಲೆ ಟನ್ ತ್ಯಾಜ್ಯವು ಆಕ್ರಮಿಸಿತ್ತು. ಇದರಿಂದಾಗಿ ವಾಯು ಹಾಗೂ ಜಲಮಾಲಿನ್ಯ ತೀವ್ರಗೊಂಡು, ಅನೇಕ ಸಾಂಕ್ರಾಮಿಕ ರೋಗಗಳು ವಕ್ಕರಿಸಿವೆ. ಈ ಕಾರಣಕ್ಕಾಗಿಯೇ ಎರಡನೇ ಹಂತದ ಸ್ವತ್ಛ ಭಾರತ ಯೋಜನೆಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು’ ಎಂದಿದ್ದಾರೆ.
ಭಾರತದಲ್ಲಿ 7-8 ವರ್ಷಗಳ ಹಿಂದೆ ಪೆಟ್ರೋಲ್‌ನಲ್ಲಿ ಎಥೆನಾಲ್ ಸಮ್ಮಿಶ್ರಣವು ಕೇವಲ ಶೇ.1ರಿಂದ 2ರಷ್ಟಿತ್ತು. ಆದರೆ, ಈಗ ಅದು ಶೇ.8ಕ್ಕೇರಿಕೆಯಾಗಿದೆ ಎಂದೂ ಮೋದಿ ಹೇಳಿದ್ದಾರೆ.
ಗೋವರ್ಧನ್ ಸ್ಥಾವರ
– ಇಡೀ ಏಷ್ಯಾ ಖಂಡದಲ್ಲೇ ಬೃಹತ್ ಬಯೋ-ಸಿಎನ್‌ಜಿ ಸ್ಥಾವರವಿದು.
– ಸಾಮರ್ಥ್ಯ – ದಿನಕ್ಕೆ 550 ಟನ್
– ಎಲ್ಲಿದೆ ಈ ಜೈವಿಕ ಸಿಎನ್‌ಜಿ ಘಟಕ? – ಇಂದೋರ್‌ನ ದೇವ್‌ಗುರಾಡಿಯಾದಲ್ಲಿ