Advertisement

ಗ್ರಾಮೀಣ ಆರ್ಥಿಕ ಚಟುವಟಿಕೆ ಹೆಚ್ಚಿಸುವ ಉದ್ದೇಶ

06:03 AM Jun 15, 2020 | Lakshmi GovindaRaj |

ಹುಣಸೂರು: ಸ್ಟೇಟ್‌ ಬ್ಯಾಂಕ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ವಿಲೀನಗೊಂಡ ಬಳಿಕ ಗ್ರಾಮೀಣರನ್ನು ಆರ್ಥಿಕ ಚಟುವಟಿಕೆ  ಯಲ್ಲಿ ತೊಡಗಿಸುವ ಸದುದ್ದೇಶದಿಂದ ಪ್ರಾದೇಶಿಕ ವಿಭಾಗವನ್ನು ತೆರೆಯಲಾಗಿದೆ ಎಂದು ಮೈಸೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಅರುಣ್‌ ಗಿರಿ ಹೇಳಿದರು.

Advertisement

ನಗರದ ಸಿಲ್ವರ್‌ ಜ್ಯುಬಿಲಿ ರಸ್ತೆಯ ಎಸ್‌ಬಿಐ ಬ್ಯಾಂಕಿನ ಮೊದಲ ಮಹಡಿ  ಯಲ್ಲಿ ಸ್ಥಾಪಿಸಿರುವ ಪ್ರಾದೇಶಿಕ ವಿಭಾಗ ಕಚೇರಿಯಲ್ಲಿ ಜಿಲ್ಲಾ ಮಾರಾಟ  ಕೇಂದ್ರ, ಹಣಕಾಸು ಸೇರ್ಪಡೆ ಹಾಗೂ ಕಿರು ಮಾರುಕಟ್ಟೆ ವಿಭಾಗವನ್ನು ಸೇವೆಗೆ ಸಮರ್ಪಿಸಿ ಮಾತನಾಡಿದರು. ನಗರದ ಸುತ್ತಮುತ್ತಲು ಶಾಖೆಗಳ ಚಟುವಟಿಕೆ ನಿಯಂತ್ರಿಸಲು, ವಹಿವಾಟು ಸುಲಲಿತವಾಗಿ ನೋಡಿಕೊಳ್ಳಲು ಹಾಗೂ ಖಾತೆದಾರರಿಗೆ  ನಿಗದಿತ ವೇಳೆಯಲ್ಲಿ ಸವಲತ್ತು ತಲುಪಿಸಲು ನೆರವಾಗಲಿದೆ.

ಪ್ರಾದೇಶಿಕ ಕಚೇರಿ ಆರಂಭದಿಂದ ವ್ಯವಸ್ಥಾಪಕರು ಸೇರಿದಂತೆ ಹೆಚ್ಚಿನ ಸಿಬ್ಬಂದಿ ಸೇವೆಗೆ ಲಭ್ಯವಾಗಲಿದೆ. ತ್ವರಿತವಾಗಿ ಕಡತಗಳು ವಿಲೇವಾರಿಯಾಗಲಿದೆ ಎಂದು ಹೇಳಿದರು.  ಈ  ವೇಳೆ ಎಸ್‌ಬಿಐ ಸಹಾಯಕ ಮುಖ್ಯ ವ್ಯವಸ್ಥಾಪಕ ಮ್ಯಾಥ್ಯೂ ಬಿನ್ನಿ, ಸೇಲ್ಸ್‌ ಹಬ್‌ ವ್ಯವಸ್ಥಾಪಕ ಶ್ರೀರಾಮ್‌, ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ್‌, ಹುಣಸೂರು ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಕುಲಕರ್ಣಿ, ಸಂತೋಷ್‌ ಕುಮಾರ್‌,  ಜ್ಞಾನಸಿಂಗ್‌, ಆನಂದ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next