Advertisement

ದ. ಕ.ದಲ್ಲಿ 2 ಲಕ್ಷ ಮತದ ಅಂತರದ ಜಯದ ಗುರಿ: ಸಂಜೀವ ಮಠಂದೂರು

01:28 AM Mar 27, 2019 | sudhir |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಮತದಾರರಲ್ಲಿ ಈ ಬಾರಿ ಹಿಂದಿಗಿಂತಲೂ ಹೆಚ್ಚು ಒಲವು ವ್ಯಕ್ತವಾಗುತ್ತಿದ್ದು, ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸುವ ಗುರಿ ಹಾಗೂ ವಿಶ್ವಾಸ ಇದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಈಗಾಗಲೇ ಸಂಘಟನಾತ್ಮಕ ಕಾರ್ಯಗಳು ಪೂರ್ಣಗೊಂಡು ಪ್ರಚಾರ ಬಿರುಸುಗೊಂಡಿವೆ. ಮಾ.28ರಿಂದ 30ರ ವರೆಗೆ ಪೇಜ್‌ ಪ್ರಮುಖರಿಂದ ಮತದಾರ ಸಂಪರ್ಕ ನಡೆಯಲಿದೆ. ಎ.3ರಿಂದ 5ರ ವರೆಗೆ ಬೂತ್‌ ಮಟ್ಟದಲ್ಲಿ ಮತದಾರರ ಮನೆ ಭೇಟಿ ನಡೆಯಲಿದೆ. ಎ.8ರಿಂದ 14ರ ವರೆಗೆ ಸಂಘಟನೆಯ ಪ್ರಮುಖರು, ಪಕ್ಷದ ನಾಯಕರಿಂದ ಗ್ರಾಮೀಣ ಮತ್ತು ನಗರ ಸಂವಾದ ಕಾರ್ಯಕ್ರಮ ಹಾಗೂ ಎ.15ರಂದು ರೋಡ್‌ಶೋ ನಡೆಯಲಿದೆ ಎಂದರು.

ನಳಿನ್‌ ಎರಡು ಅವಧಿಗಳಲ್ಲಿ ಸಂಸದರಾಗಿ ಆಯ್ಕೆಯಾಗಿ ಅನೇಕ ಅಭಿವೃದ್ಧಿ ಕೈಗೊಂಡಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ 16,000 ಕೋ.ರೂ.ಗೂ ಅಧಿಕ ಅನುದಾನ ತಂದಿದ್ದಾರೆ. ಮೋದಿಯವರ ಐದು ವರ್ಷಗಳ ಆಡಳಿತ ಮತ್ತು ನಳಿನ್‌ ಅವರ ಜನಪರ ಕಾರ್ಯಗಳು ಹಾಗೂ ಅಭಿವೃದ್ಧಿ ಯೋಜನೆಗಳು ಜನರ ಮುಂದಿವೆ. ಈ ಬಾರಿ ನಳಿನ್‌ ಕುಮಾರ್‌ ಕಟೀಲು ಅತ್ಯಧಿಕ ಮತಗಳಿಂದ ಜಯ ಸಾಧಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕರು ಹತಾಶರಾಗಿ ಬದಿಗೆ ಸರಿದಿದ್ದಾರೆ.

ಯುವಕರೊಬ್ಬರನ್ನು ಕಣಕ್ಕೆ ಇಳಿಸಿದ್ದಾರೆ. ನಾಯಕರ ನಡುವೆ ಗೊಂದಲಮಯ ಪರಿಸ್ಥಿತಿ ನೆಲೆಸಿದೆ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರಕಾರದಡಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಅರಾಜಕತೆ ನೆಲೆಸಿದೆ. ಜನ ಬೇಸತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಆಕ್ರೋಶವನ್ನು ಹೊರಹಾಕಲಿದ್ದಾರೆ ಎಂದವರು ಹೇಳಿದರು.

ಶಾಸಕರಾದ ಅಂಗಾರ, ಡಾ| ಭರತ್‌ ಶೆಟ್ಟಿ, ಹರೀಶ್‌ ಪೂಂಜ, ಮಾಧ್ಯಮ ವಕ್ತಾರರಾದ ಜೀತೆಂದ್ರ ಕೊಟ್ಟಾರಿ, ರಾಕೇಶ್‌ ಕೊಟ್ಟಾರಿ ಉಪಸ್ಥಿತರಿದ್ದರು.

Advertisement

ಚುನಾವಣ ಪ್ರಚಾರಕ್ಕೆ ಮೋದಿ
ಕ್ಷೇತ್ರದಲ್ಲಿ ವಿವಿಧ ಕಡೆ ಬಿಜೆಪಿ ಪರ 55 ಬಹಿರಂಗ ಚುನಾವಣ ಪ್ರಚಾರ ಸಭೆಗಳು ನಡೆಯಲಿವೆ. ಪ್ರಧಾನಿ ಮೋದಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಭಾಗವಹಿಸುವ ದಿನಾಂಕ ವಾರದೊಳಗೆ ನಿರ್ಧಾರ ವಾಗಲಿದೆ ಎಂದು ಸಂಜೀವ ಮಠಂದೂರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next