Advertisement

ಬೇಡಿಕೆಗನುಗುಣವಾಗಿ ವಿದ್ಯುತ್‌ ಉತ್ಪಾದನೆ ಗುರಿ

06:02 PM Aug 01, 2022 | Team Udayavani |

ಬಸವಕಲ್ಯಾಣ: ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೆಚ್ಚಳದ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

Advertisement

ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ಆಯೋಜಿಸಿದ್ದ ಉಜ್ವಲ ಭಾರತ ಉಜ್ವಲ ಭಾರತ ಉಜ್ವಲ ಭವಿಷ್ಯ ವಿದ್ಯುತ್‌ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

2014ರಲ್ಲಿ 2.48 ಲಕ್ಷ ಮೆ. ವ್ಯಾಟ್‌ನಷ್ಟಿದ್ದ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ 8 ವರ್ಷದಲ್ಲಿ 4 ಲಕ್ಷ ಮೆ. ವ್ಯಾಟ್‌ಗೆ ಹೆಚ್ಚಿಸಲಾಗಿದೆ. ದೇಶದ ಜನಸಂಖ್ಯೆ ಮತ್ತು ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು.

2015ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸರಾಸರಿ 12.5 ಗಂಟೆಗಳ ವಿದ್ಯುತ್‌ ಪೂರೈಕೆ ಅವಧಿ ಈಗ ಸರಾಸರಿ 22.5 ಗಂಟೆಗೆ ಏರಿಕೆಯಾಗಿದೆ. ಸೌರ ಪಂಪ್‌ಸೆಟ್‌ ಅಳವಡಿಸಿಕೊಳ್ಳಲು ಜಾರಿಗೆ ತರಲಾಗಿರುವ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ಶೇ.30 ಸಬ್ಸಿಡಿ ನೀಡಲಾಗುತ್ತಿದ್ದು, ಶೆ.30 ಸಾಲ ಸೌಲಭ್ಯವೂ ಸಿಗಲಿದೆ ಎಂದರು.

ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದು. ಈ ನಿಟ್ಟಿನಲ್ಲಿ ಅಧಿ ಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕರ್ತವ್ಯ ನಿಷ್ಠೆ ಮತ್ತು ಜವಾಬ್ದಾರಿಯಿಂದ ಎಲ್ಲರೂ ಇನ್ನಷ್ಟು ಕೆಲಸ ಮಾಡಬೇಕು ಎಂದರು.

Advertisement

ಇಲಾಖೆಯವರು ಕೆಲಸ ಮಾಡುತ್ತಿಲ್ಲ ಎಂದು ಆಪಾದನೆ ಇಲ್ಲ. ಆದರೆ ಇನ್ನಷ್ಟು ಕೆಲಸ ಮಾಡಬೇಕು ಎಂದು ವಿನಂತಿಸುತ್ತೇನೆ. ಹಳ್ಳಿ ಹಾಳಾಗಿ ಪಟ್ಟಣ ಬೆಳೆಯಲು ವಿದ್ಯುತ್‌ ಕೊರತೆಯೂ ಕಾರಣ. ಹಳ್ಳಿಗಳು ಬೆಳಗಬೇಕು. ಇದಕ್ಕಾಗಿ ನೀವೆಲ್ಲ ಹಳ್ಳಿ ಕಡೆ ಹೆಚ್ಚು ಗಮನ ಹರಿಸಬೇಕು. ಸಣ್ಣಪುಟ್ಟ ಸಮಸ್ಯೆಗಳಿವೆ. ಇವುಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಸಿರಗಾಪುರ, ಸಹಾಯಕ ಆಯುಕ್ತ ರಮೇಶ ಕೋಲಾರ, ಎನ್‌ಟಿಪಿಸಿ ಅ ಧಿಕಾರಿ ಅನಿರುದ್ಧಸಿಂಗ್‌, ಮಹೇಂದ್ರರೆಡ್ಡಿ, ಪ್ರಮುಖರಾದ ಅಶೋಕ ವಕಾರೆ, ಸಿದ್ದು ಪಾಟೀಲ ಹುಮನಾಬಾದ, ಪ್ರದೀಪ ವಾತಡೆ, ರವೀಂದ್ರ ಗಾಯಕವಾಡ, ರವಿ ಚಂದನಕೆರೆ, ಅನೀಲ ಭೂಸಾರೆ, ಗುಂಡುರೆಡ್ಡಿ, ಸುಧಿಧೀರ ಕಾಡಾದಿ, ಚಂದ್ರಶೇಖರ ಪಾಟೀಲ್‌, ಹುಮನಾನಾದ ಕಾರ್ಯ ನಿರ್ವಾಹಕ ಅಭಿಯಂತರ ಸಂತೋಷ ಮಟ್ಟೆ, ಎ ಇಇ ಗಣಪತಿ ಮೈನಾಳೆ ಸೇರಿದಂತೆ ಅಧಿ ಕಾರಿಗಳು ಇದ್ದರು. ಜೆಸ್ಕಾಂ ಬೀದರ ವೃತ್ತದ ಅಧೀಕ್ಷಕ ಅಭಿಯಂತರ ಸಚಿನ ಹುಂಡೇಕರ್‌ ಸ್ವಾಗತಿಸಿದರು. ಬೀದರ ಕಚೇರಿ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ ನಿರೂಪಿಸಿದರು.

ದೇಶದಲ್ಲಿ ಹಿಂದೆ 18 ಸಾವಿರ ಹಳ್ಳಿಗಳು ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿದ್ದವು. ಈಗ ಸಾಕಷ್ಟು ಬದಲಾವಣೆಯಾಗಿದೆ. ದೇಶದಲ್ಲಿ 3 ಕೋಟಿ ಬಡ ಜನರಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್‌ ಉತ್ಪಾದನಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿ ಸಲಾಗಿದ್ದು, ಇಂದು ಭಾರತ ನೆರೆ ರಾಷ್ಟ್ರಗಳಿಗೆ ವಿದ್ಯುತ್‌ ರಫ್ತು ಮಾಡುತ್ತಿದೆ.
*ಭಗವಂತ ಖೂಬಾ,ಸಚಿವ

Advertisement

Udayavani is now on Telegram. Click here to join our channel and stay updated with the latest news.

Next