Advertisement

“ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುವ ಗುರಿ’

10:56 PM Feb 28, 2020 | mahesh |

ಪುತ್ತೂರು: ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ರಾಜ್ಯ ಬಿಜೆಪಿ ಸರಕಾರ ತಲುಪಬೇಕು ಎಂಬ ದೃಢ ಸಂಕಲ್ಪದೊಂದಿಗೆ ಮುಖ್ಯಮಂತ್ರಿ ರಾಜ್ಯದಲ್ಲಿ ವಿಕಸನ ಪರ್ವ ಆರಂಭಿಸಿ ದ್ದಾರೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ನಗರಸಭಾ ವ್ಯಾಪ್ತಿಯಲ್ಲಿ ನಗರ ಬಡತನ ನಿರ್ಮೂಲನ ಕೋಶದಡಿ ಆಯೆ ಯಾದ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡಿದರು. ಮಾಸಾಶನ, ಶೌಚಾಲಯ, ಡ್ರೈವಿಂಗ್‌ ಲೈಸೆನ್ಸ್‌, ವಿದ್ಯುತ್‌ ಸಂಪರ್ಕ, ಮನೆ ರಿಪೇರಿ ಕಾರ್ಯಗಳಿಗಾಗಿ 203 ಫಲಾ ನುಭವಿಗಳಿಗೆ 32.66 ಲಕ್ಷ ರೂ. ಮೊತ್ತದ ಸೌಲಭ್ಯಗಳ ಚೆಕ್‌ ವಿತರಿಸಿದರು.

ಕಟ್ಟಡಕ್ಕೆ 5 ಕೋಟಿ ರೂ.
ಪುತ್ತೂರು ನಗರಸಭೆಯನ್ನು ಮಾದರಿಯಾಗಿ ಪರಿವರ್ತಿಸ ಲಾಗುವುದು. ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಕಾಮಗಾರಿಗಳು ಆರಂಭ ವಾಗಿದೆ. ಮಾ. 31ರ ಒಳಗೆ ಪೂರ್ಣ ಗೊಳ್ಳಲಿದೆ. ನಗರಸಭೆಯ ಸುಸಜ್ಜಿತ ಕಟ್ಟಣ ನಿರ್ಮಾಣಕ್ಕಾಗಿ 5 ಕೋಟಿ ರೂ. ಅನುದಾನವನ್ನು ಶಾಸಕರ ಅನುದಾನದಿಂದ ಮಂಜೂರು ಮಾಡಿಸುತ್ತೇನೆ. ಎಸ್‌.ಎಚ್‌.ಡಿ.ಪಿ. ಯೋಜನೆಯಡಿ ನಗರಸಭಾ ವ್ಯಾಪ್ತಿಯ ದರ್ಬೆ ಮತ್ತು ಕೃಷ್ಣ ನಗರ ಪ್ರದೇಶ ದಲ್ಲಿ ಚತುಷ್ಪಥ ಕಾಮಗಾರಿಗಳು ನಡೆಯುತ್ತಿವೆ. ನಗರದ 10 ಕಡೆಗಳಲ್ಲಿ ಸುರಕ್ಷತ ದೃಷ್ಟಿಯಿಂದ ಸಿ.ಸಿ. ಕೆಮರಾ ಅಳವಡಿಸಲಾಗಿದೆ ಎಂದರು.

4.5 ಕೋಟಿ ರೂ.
ಕಾಲನಿಗಳಿಗೆ ಮರು ವಸತಿ ಕಲ್ಪಿಸಲು 4.5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಒಳ ಚರಂಡಿ ಯೋಜನೆಗೆ ಆದ್ಯತೆ ನೀಡಲಾಗಿದೆ. ನಗರ ಸ್ವತ್ಛತೆಗಾಗಿ ಹತ್ತು ವಾಹನಗಳು ಬರಲಿವೆ. 2.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಡಂಪಿಂಗ್‌ ಯಾರ್ಡ್‌ ಮತ್ತು ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗಲಿದೆ ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು. ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಸ್ವಾಗತಿಸಿ, ನಗರಸಭೆಯ ಪರಿಸರ ಎಂಜಿನಿಯರ್‌ ಗುರುಪ್ರಸಾದ್‌ ಶೆಟ್ಟಿ ವಂದಿಸಿದರು. ನಗರಸಭಾ ಸಿಬಂದಿ ರವೀಂದ್ರ ಕಾರ್ಯಕ್ರಮ ನಿರ್ವಹಿಸಿದರು.

ಜಲಸಿರಿ ಯೋಜನೆಗೆ 115 ಕೋಟಿ ರೂ.
ಪ್ರಧಾನಿ ನರೇಂದ್ರ ಮೋದಿ ಸ್ವತ್ಛ ಭಾರತ್‌ – ಶ್ರೇಷ್ಠ ಭಾರತ್‌ ನಿರ್ಮಾಣದ ಕಲ್ಪನೆಯನ್ನು ಸಾಕಾರಗೊಳಿಸಲು ಪುತ್ತೂರು ನಗರಸಭೆ ಕೆಲಸ ಮಾಡಲಿದೆ. ಜನರಿಗೆ 24 ಗಂಟೆ ನೀರು ಸರಬರಾಜು ಮಾಡುವ ದೂರಗಾಮಿ ಯೋಜನೆ ಜಲಸಿರಿ 115 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ಮಠಂದೂರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next