Advertisement

ಕೋವಿಡ್ 19 ನಿರ್ವಹಣೆ ಕುರಿತು ಶ್ವೇತಪತ್ರ ಬಿಡುಗಡೆಗೊಳಿಸಿದ ರಾಹುಲ್ ಗಾಂಧಿ

10:13 AM Jun 23, 2021 | Team Udayavani |

ನವದೆಹಲಿ: ಪ್ರಸ್ತುತ ಇಡೀ ದೇಶವನ್ನೇ ಆವರಿಸಿರುವ ಕೋವಿಡ್ ಪರಿಸ್ಥಿತಿಯ ನಿರ್ವಹಣೆ ಕುರಿತಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪಕ್ಷದ ಪರವಾಗಿ ಶ್ವೇತಪತ್ರವೊಂದನ್ನು ಹೊರತಂದಿದ್ದಾರೆ.

Advertisement

ಇದನ್ನೂ ಓದಿ:ಛಲದಂಕಮಲ್ಲ: ತಾನು ಕಟ್ಟಿದ್ದ ದೈತ್ಯ ಆ್ಯಪಲ್ ಕಂಪನಿಯಿಂದಲೇ ಹೊರಬಿದ್ದಿದ್ದ ಸ್ಟೀವ್ ಜಾಬ್ಸ್!

ಈ ಕುರಿತಂತೆ, ವರ್ಚ್ಯುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “”ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರುವುದಲ್ಲ. ಬದಲಿಗೆ, ದೇಶ ಎದುರಿಸುತ್ತಿರುವ ಸಾಂಕ್ರಾಮಿಕ ಸಮಸ್ಯೆಯನ್ನು ಎದುರಿಸುವ ಕುರಿತು ಕೆಲವು ಸಲಹೆಗಳನ್ನು ಕೊಡುವ ನಿಟ್ಟಿನಲ್ಲಿ ಈ ಶ್ವೇತಪತ್ರ ತರಲಾಗಿದೆ” ಎಂದು ಹೇಳಿದ್ದಾರೆ.

“ದೇಶದ 82.7 ಜನರಿಗೆ ಲಸಿಕೆ ಸಿಗುವಂತೆ ಮಾಡಿರುವುದು ಶ್ಲಾಘನೀಯ. ಆದರೆ, ಈ ಮೂಲಕ ದಾಖಲೆ ಬರೆದೆವು ಎಂದು ಬೀಗಬಾರದು. ಲಸಿಕೆ ನೀಡುವಿಕೆಯನ್ನು ಸಮರೋಪಾದಿಯಲ್ಲಿ ಮುಂದುವರಿಸಬೇಕು. ಕೋವಿಡ್ ವಿಚಾರದಲ್ಲಿ ಎಲ್ಲಾ ರಾಜ್ಯಗಳನ್ನೂ ಸಮಾನವಾಗಿ ನೋಡಬೇಕು” ಎಂದಿದ್ದಾರೆ.

ಬಿಜೆಪಿ ಆಕ್ಷೇಪ: ರಾಹುಲ್‌ ಅವರ ಶ್ವೇತಪತ್ರವನ್ನು ಬಿಜೆಪಿ ಆಕ್ಷೇಪಿಸಿದೆ. “ಕೋವಿಡ್ ವಿಚಾರದಲ್ಲಿ ರಾಹುಲ್‌ ಗಾಂಧಿ ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ. ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಏನೇ ಒಳ್ಳೆ ಕೆಲಸ ಮಾಡಿದರೂ ಅದನ್ನು ಹಾದಿ ತಪ್ಪಿಸುವಲ್ಲಿ ಅವರು ನಿರತರಾಗಿರುತ್ತಾರೆ” ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next