ಕಿನ್ನಿಗೋಳಿ: ಐಕಳದಲ್ಲಿ ನಡೆಯುವ ಕಂಬಳ ಜಾನಪದ ಹಾಗೂ ಧಾರ್ಮಿಕ ಐತಿಹ್ಯವುಳ್ಳದ್ದು. ಇದು ಒಂದು ಗ್ರಾಮ ಹಬ್ಬವೂ ಹೌದು. ಉಭಯ ಜಿಲ್ಲೆಯಲ್ಲಿ ನಡೆಯುವ ಹೆಚ್ಚಿನ ಕಂಬಳಗಳಿಗೆ ಬ್ಯಾಂಕ್ ವತಿಯಿಂದ ಸಹಕಾರ ನೀಡಲಾಗುತ್ತಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಶನಿವಾರ ಸಂಜೆ ಐಕಳ ಬಾವ ಕಾಂತಾಬಾರೆ ಬೂದಾಬಾರೆ 48ನೇ ವರ್ಷದ ಕಂಬಳದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಸಮಿತಿಯ ಅಧ್ಯಕ್ಷರಾದ ಅನಂತರ ಈ ಕಂಬಳಕ್ಕೆ ಹೊಸ ರೂಪ ಸಿಕ್ಕಿದೆ. ಬೇರೆ ಕಂಬಳಗಳಿಗೆ ಮಾದರಿಯಾಗಿರುವುದು ಮಾತ್ರ ವಲ್ಲದೆ ದೇಶ ವಿದೇಶದಲ್ಲಿ ಐಕಳ ಕಂಬಳದ ಬಗ್ಗೆ ಮಾತಾಡುವಂತಾಗಿದೆ ಎಂದು ಸರಕಾರದಿಂದ ಕೂಡ ಕಂಬಳಕ್ಕೆ ಸಹಕಾರ ಸಿಗಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಕಂಬಳ ಕರೆಯಲ್ಲಿ ಗೇಟ್ ಸಿಸ್ಟಮ್ ಹಾಗೂ ಫೋಟೋಫಿನಿಶ್ ತಂತ್ರಜ್ಞಾನಕ್ಕೆ ಚಾಲನೆ ನೀಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ವಿನಯ ಕುಮಾರ್ ಸೂರಿಂಜೆ, ಜಯಕರ ಶೆಟ್ಟಿ ಇಂದ್ರಾಳಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವೇಕ್ ಆಳ್ವ, ಕೃಷ್ಣ ಪ್ಯಾಲೇಸ್‌ನ ಕೃಷ್ಣ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್, ರೋಹಿತ್ ಹೆಗ್ಡೆ ಎರ್ಮಾಳು, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಶಶಿಕುಮಾರ್ ರೈ ಮುಲ್ಲಟ್ಟು, ವಾದಿರಾಜ ಶೆಟ್ಟಿ ಮುಂಡ್ಕೂರು, ಬಾಲಕೃಷ್ಣ ಶೆಟ್ಟಿ, ಸುಚರಿತ ಶೆಟ್ಟಿ, ಐಕಳ ಗುಣಪಾಲ ಶೆಟ್ಟಿ ಮುಂಬಯಿ, ಐಕಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಚೌಟ, ಜಯಪ್ರಕಾಶ್ ತುಂಬೆ, ವೇಣುಗೋಪಾಲ ಶೆಟ್ಟಿ, ಸುಧೀರ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಭಟ್, ನಮ್ಮ ಕುಡ್ಲದ ವಾಹಿನಿಯ ಲೀಲಾಕ್ಷ ಕರ್ಕೇರಾ, ಕುಶಲ ಭಂಡಾರಿ ಐಕಳ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪುರಂದರ ವಿ. ಶೆಟ್ಟಿ ಐಕಳ ಬಾವ, ಸ್ವರಾಜ್ ಶೆಟ್ಟಿ ಮುಂಡ್ಕೂರು, ಐಕಳ ಮುರಳೀಧರ ಶೆಟ್ಟಿ, ಲೀಲಾಧರ ಶೆಟ್ಟಿ ಉಪಸ್ಥಿತರಿದ್ದರು.
ಡಾ| ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಚಿತ್ತರಂಜನ್ ಭಂಡಾರಿ ವಂದಿಸಿದರು. ಸಾಯಿನಾಥ ಶೆಟ್ಟಿ ನಿರ್ವಹಿಸಿದರು.
“ಕರಾವಳಿ ರತ್ನ’ ಪುರಸ್ಕಾರ ಪ್ರದಾನ
ಐಕಳ ಕಂಬಳದ ಗೌರವಾಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ “ಕರಾವಳಿ ರತ್ನ’ ಬಿರುದು ನೀಡಿ ಗೌರವಿಸಲಾಯಿತು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್ ಅಳ್ವ, ಮುಂಬಯಿ ಉದ್ಯಮಿ ಕೃಷ್ಣ ಶೆಟ್ಟಿ ದಂಪತಿಗಳನ್ನು ಸಮ್ಮಾನಿಸಲಾಯಿತು.