ಐಕಳ : ಕಂಬಳ ಕ್ರೀಡೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಇಲ್ಲಿನ ಜನರಲ್ಲಿ ಕಂಬಳ ಹಾಸುಹೊಕ್ಕಾಗಿ ಅದರಲ್ಲೂ ಧಾರ್ಮಿಕ ನೆಲೆ ಕಂಡುಕೊಂಡಿದ್ದಾರೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರಿರತ್ನ ಡಾ| ಎಂ. ಎನ್. ರಾಜೇಂದ್ರಕುಮಾರ್ ಹೇಳಿದರು.
ಜ.26ರಂದು ನಡೆದ ಐಕಳಬಾವ ಕಾಂತಾಬಾರೆ-ಬೂದಾಬಾರೆ ಜೋಡುಕರೆ ಕಂಬಳ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಐಕಳಬಾವ ಯಜಮಾನ ದೋಗಣ್ಣ ಶೆಟ್ಟಿ, ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿಗಳಾದ ಅಶೋಕ್ ಅಡ್ಯಂತಾಯ, ಅಶೋಕ್ ಎನ್. ಶೆಟ್ಟಿ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಉಡುಪಿ ವಕ್ಛ್ ಬೋರ್ಡ್ ಉಪಾಧ್ಯಕ್ಷ ಹಾಜಿ ಗುಲಾಂ ಮಹಮ್ಮದ್, ರಮೇಶ ಶೆಟ್ಟಿ ಗೋಪಾಲಕೃಷ್ಣ ಭಟ್, ಚಿತ್ರ ನಟಿ ಐಶ್ವರ್ಯಾ ಆಚಾರ್ಯ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಸಂಚಾಲಕ ಐಕಳ ಮುರಳೀಧರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೃಷ್ಣ ಮಾರ್ಲ, ಯೋಗೀಶ್ ರಾವ್, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ಮುಂಬಯಿ ಸಮಿತಿಯ ಕುಶಲ್ ಭಂಡಾರಿ ಐಕಳ ಬಾವ, ಗಣನಾಥ ಜೆ. ಶೆಟ್ಟಿ ಐಕಳಬಾವ, ತಿಲಕ್ ರಾಜ್ ಬಲ್ಲಾಳ್ ಐಕಳಬಾವ, ಪುರಂದರ ಶೆಟ್ಟಿ ಐಕಳಬಾವ, ವೇಣುಗೋಪಾಲ ಶೆಟ್ಟಿ ಐಕಳ ಬಾವ, ಸ್ವರಾಜ್ ಶೆಟ್ಟಿ, ಐಕಳಬಾವ ಜಯಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಸ್ವಾಗತಿಸಿದರು. ಶ್ರೀಶ ಸರಾಫ್ ಅವರು ಕಾರ್ಯಕ್ರಮ ನಿರೂಪಿಸಿದರು.
ಸಮ್ಮಾನ
ಸಾಧಕರಾದ ಅದಾನಿ ಪವರ್ ಕಾರ್ಪೊರೇಷನ್ ಆಡಳಿತ ನಿರ್ದೇಶಕ ಕಿಶೋರ್ ಆಳ್ವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಯಿರಾಧ ಗ್ರೂಫ್ ಆಫ್ ಕಂಪೆನೀಸ್ ಆಡಳಿತ ನಿರ್ದೇಶಕ ಮನೋಹರ್ ಎಸ್. ಶೆಟ್ಟಿ, ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಸಮ್ಮಾನಿಸಲಾಯಿತು. ಜತೆಗೆ ಸಾಧಕ ಹಾಗೂ ದಾನಿಗಳನ್ನು ಗೌರವಿಸಲಾಯಿತು.