Advertisement

ಶೈಕ್ಷಣಿಕ ಗೊಂದಲ ನಿವಾರಣೆಗೆ ಎಐಡಿಎಸ್‌ಒ ಆಗ್ರಹ

03:05 PM Apr 27, 2022 | Team Udayavani |

ರಾಯಚೂರು: ಹೊಸ ವಿಶ್ವವಿದ್ಯಾಲಯದಲ್ಲಿ ಉಂಟಾಗಿರುವ ಶೈಕ್ಷಣಿಕ ಗೊಂದಲವನ್ನು ಪರಿಹರಿಸಿ, ಕೂಡಲೇ ಪರೀಕ್ಷೆಗಳನ್ನು ಆರಂಭಿಸುವಂತೆ ಆಗ್ರಹಿಸಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಜೇಷನ್‌ (ಎಐಡಿಎಸ್‌ಒ) ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಡಿಸಿ ಕಚೇರಿ ಎದುರು ಸಮಿತಿ ಸದಸ್ಯರು ಹೋರಾಟ ನಡೆಸಿ ಬಳಿಕ ಡಿಸಿ ಕಚೇರಿ ಅ ಕಾರಿಗೆ ಮನವಿ ಸಲ್ಲಿಸಿದರು. ಕಳೆದ 2 ವರ್ಷ ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ ಇಡೀ ದೇಶದ ಶಿಕ್ಷಣ ವ್ಯವಸ್ಥೆಯೇ ಬುಡಮೇಲಾಗಿದೆ. ಅಂತಹ ಸಂದರ್ಭದಲ್ಲಿ ಸರ್ಕಾರ ಹೊಸ ಕೊಠಡಿಗಳನ್ನು ನಿರ್ಮಿಸುವುದು, ಶಿಕ್ಷಕರ ಉಪನ್ಯಾಸಕರ, ಬೋಧಕೇತರ ಸಿಬ್ಬಂದಿ ನೇಮಿಸುವ ಬದಲು ಪೋಷಕರ, ಶಿಕ್ಷಣ ತಜ್ಞರ, ಶಿಕ್ಷಕರ, ವಿದ್ಯಾರ್ಥಿ ಸಂಘಟನೆಗಳ ಅಭಿಪ್ರಾಯ ಪಡೆಯದೇ ಹಾಗೂ ಯಾವುದೇ ಪೂರ್ವತಯಾರಿ ಇಲ್ಲದೆ ತರಾತುರಿಯಲ್ಲಿ ಎನ್‌ಇಪಿ ಅಳವಡಿಸಿರುವುದು ಇಂದಿನ ಶೈಕ್ಷಣಿಕ ಗೊಂದಲಕ್ಕೆ ಮೂಲ ಕಾರಣವಾಗಿದೆ ಎಂದರು.

ಯುಯುಸಿಎಂಎಸ್‌ ಹೊಸದಾಗಿ ತಂದಿರುವ ಉದ್ದೇಶವಾದರೂ ಏನು? ಶಿಕ್ಷಣ ತಜ್ಞರು ಅಭಿಪ್ರಾಯ ಪಡೆಯದೇ ಸರ್ಕಾರ ಏಕೆ ಇಂತಹ ನಿರ್ಧಾರಕ್ಕೆ ಬಂದಿದೆ.  ದಿಢೀರನೇ ಯುಯುಸಿಎಂಎಸ್‌ ಹೇರಿಕೆಯೇ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ವಿಶ್ವವಿದ್ಯಾಲಯಗಳಲ್ಲಿ ಉಂಟಾದ ಶೈಕ್ಷಣಿಕ ಗೊಂದಲವನ್ನು ಈ ಕೂಡಲೇ ಪರಿಹರಿಸಿ ಪದವಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಹಯ್ನಾಳಪ್ಪ, ಪೀರ್‌ ಸಾಬ್‌, ಹೇಮಂತ್‌, ವೀರೇಶ್‌, ಕಾರ್ತಿಕ್‌, ವಿಶ್ವಾಸ, ಅಶೊಕ, ಸುಮನ್‌, ಉಮಾಪತಿ ಸೇರಿ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next