Advertisement

ಎಐಡಿಎಸ್‌ಒ ಸಂಘಟನೆ ಪ್ರತಿಭಟನೆ

04:22 PM Aug 19, 2017 | Team Udayavani |

ಸುರಪುರ: ಎಂಜನಿಯರಿಂಗ್‌ ವ್ಯಾಸಂಗದ ಫಲಿತಾಂಶ ಪ್ರಕಟಣೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವುದು ಸೇರಿದಂತೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ಕೆಲಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಹಸನಾಪುರದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದಲ್ಲಿ ಪ್ರತಿಭಟಿಸಿದರು. 2016ರಲ್ಲಿ ನಡೆದ ಇಂಜಿನಿಯರಿಂಗ್‌ ಪರೀಕ್ಷೆಗಳ ಫಲಿತಾಂಶವನ್ನು ವಿಟಿಯು ಸಾಕಷ್ಟು ವಿಳಂಬವಾಗಿ ಪ್ರಕಟಿಸಿತು. ಮರುಮೌಲ್ಯಮಾಪನದ ಫಲಿತಾಂಶ ಹಿಂದಿನ ರಾತ್ರಿ ಪ್ರಕಟಿಸಿತ್ತು. ಇದರಿಂದ ಕ್ರಾಷ್‌ ಸೆಮಿಸ್ಟರ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳು 16ರಿಂದ 20 ವಿಷಯಗಳ ಪರೀಕ್ಷೆ ಬರೆದರು. ಹೀಗಾಗಿ ಬಹುತೇಕ ವಿದ್ಯಾರ್ಥಿಗಳು ಉತೀರ್ಣ ಆಗಲ್ಲಿಲ್ಲ ಎಂದು ಆರೋಪಿಸಿದರು. 2010ರ ಸ್ಕೀಮ್‌ ವಿದ್ಯಾರ್ಥಿಗಳಿಗೆ. 2015-16ರಿಂದ
ವಿಟಿಯು ಸಿಬಿಸಿಎಸ್‌ ಮಾದರಿಯನ್ನು ಅಳವಡಿಸಿದೆ. ಕೋರ್ಸ್‌ನ ಅರ್ಧ ಭಾಗವನ್ನು 2010ರ ಮಾದರಿಯಲ್ಲಿ ಹಾಗೂ ಉಳಿದರ್ಧ ಭಾಗವನ್ನು ಸಿಬಿಸಿಎಸ್‌ ಮಾದರಿಯಲ್ಲಿ ಕಲಿಯುವುದು ವಿದ್ಯಾರ್ಥಿಗಳ ಸಮಗ್ರ ಜ್ಞಾನಾರ್ಜನೆಗೆ ಭಂಗವನ್ನುಂಟು ಮಾಡುತ್ತದೆ ಎಂದು ದೂರಿದರು.
2010 ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬೋಧನೆಯ ವ್ಯವಸ್ಥೆ ಮಾಡಬೇಕೆಂದು ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ. ಎಲ್ಲಾ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಕೊರತೆ ಇದೆ. ಹೀಗಾಗಿ ಬೇರೆ ಬೇರೆ ತರಗತಿಗಳನ್ನು ಸಮಾನಾಂತರವಾಗಿ ನಡೆಸುವುದು ಕಷ್ಟ ಈ ದ್ವಂದ್ವ ನಿಲುವಿನಿಂದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಠಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಉನ್ನತ ಶಿಕ್ಷಣ ಸಚಿವರಿಗೆ ಬರೆದ ಬೇಡಿಕೆಯ ಮನವಿಯನ್ನು ಗ್ರೇಡ್‌-2 ತಹಶೀಲ್ದಾರ ಸೋಫಿಯಾ ಸುಲ್ತಾನ ಅವರಿಗೆ ಸಲ್ಲಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ವಿಟಿಯು ಸಂಘಟನೆ ಪ್ರಮುಖ ಹೆಚ್‌.ಪಿ ಸೈದಪ್ಪ, ಶಿವರಾಜ್‌ ಹೆಳವರ್‌, ಸುಬಾಶ್‌, ವಿದ್ಯಾರ್ಥಿಗಳಾದ ಅಶ್ವಿ‌ನಿ,ರೇಣುಕಾ, ರಂಜಿತಾ, ಸ್ವಪ್ನ, ಪ್ರಿಯಾಂಕ, ಶಿವರಾಜ,ಅಲ್ಲಾಬಕ್ಷ, ರೋಶನ್‌, ಚರಣ್‌ರಾಜ್‌, ನಾಡಗೌಡ, ಸುನೀಲ್‌, ಬಸವರಾಜ್‌,ರೋಹಿತ್‌, ವಿರೇಶ, ಇತರೆ
ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next