Advertisement

ಏಡ್ಸ್‌- ಎಚ್‌ಐವಿ ಸೋಂಕಿತರಿಗೂ ಬದುಕುವ ಹಕ್ಕಿದೆ

11:41 AM Dec 02, 2020 | Suhan S |

ದೇವನಹಳ್ಳಿ: ಎಚ್‌ಐವಿ ಏಡ್ಸ್‌ ರೋಗಿಗಳಿಗೂ ಸಮಾಜದಲ್ಲಿ ಸಾಮಾನ್ಯ ಜನರಂತೆ ಬದುಕುವ ಹಕ್ಕಿದೆ. ಇಂತಹ ರೋಗಿಗಳ ವ್ಯಾಜ್ಯಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ನಡೆಸಿಕೊಡಲಾಗುತ್ತದೆ ಎಂದು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆರ್‌.ನಟೇಶ್‌ ತಿಳಿಸಿದರು.

Advertisement

ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಿ.1 ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ವಿಶ್ವ ಏಡ್ಸ್‌ದಿನಾಚರಣೆ-2020ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು. ಎಚ್‌ಐವಿ ಸೋಂಕಿತರನ್ನು ಮತ್ತು ವಿಕಲ ಚೇತನರನ್ನುಕೀಳಾಗಿ ಕಂಡರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಎಚ್‌ಐವಿ ಸೋಂಕಿತರು ಮತ್ತು ವಿಕಲ ಚೇತನರು ಸಾಮಾನ್ಯರಂತೆ ಮುಖ್ಯ ವಾಹಿನಿಗೆ ಬರುವಂತಹ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ, ಸಮುದಾಯದ ಬದಲಾವಣೆಯಲ್ಲಿ

ಭಾಗಿಯಾಗಬೇಕು. ಅನೈತಿಕ ದೈಹಿಕ ಸಂಬಂಧದಿಂದ ಏಡ್ಸ್‌ ಸೋಂಕು ಹರಡಬಹುದು. ಮುಂಜಾಗ್ರತಾ ಕ್ರಮಗಳಿಂದ ಇದನ್ನು ತಡೆಗಟ್ಟಬಹುದಾಗಿದೆ. ಏಡ್ಸ್‌ ಗುಣಲಕ್ಷಣಗಳು ಹಾಗೂ ನಿಯಂತ್ರಣಕ್ಕೆಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಜನರಲ್ಲಿ ಏಡ್ಸ್‌ ಆಂದೋಲನ ಹಮ್ಮಿಕೊಂಡು ಅರಿವು ಮೂಡಿಸುವ ಪ್ರಯತ್ನ ಎಲ್ಲರಿಂದಲೂ ಆಗಬೇಕು. ಇಂದಿನ ಯುವಕರು ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಹಂತದಲ್ಲಿ ಏಡ್ಸ್‌ ತಡೆಗಟ್ಟುವಿಕೆಯಲ್ಲಿ ಎಚ್ಚೆತ್ತಕೊಂಡರೆ, ಆರೋಗ್ಯವಂತ ಸಮಾಜ ಸಾಧ್ಯ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌.ಕೆ.ನಾಯಕ್‌ ಮಾತನಾಡಿ, ಎಚ್‌ಐವಿ ಸೋಂಕಿತರಿಗೆ  ಧೈರ್ಯ ತುಂಬುವಕೆಲಸ ಮಾಡಬೇಕು ಎಂದರು. ಜಿಪಂ ಸಿಇಒ ಎನ್‌.ಎಂ.ನಾಗರಾಜ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಶಕೀಲ, ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next