ನವದೆಹಲಿ : ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಇಂದು (ಬುಧವಾರ) ಪ್ರಕಟವಾಗಲಿದ್ದು ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರಲ್ಲಿ ಯಾರು ಅಧ್ಯಕ್ಷ ಪಟ್ಟಕ್ಕೇರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ಇಂದು ನಡೆಯುವ ಚುನಾವಣಾ ಫಲಿತಾಂಶದೊಂದಿಗೆ ಬರೋಬ್ಬರಿ 24 ವರ್ಷಗಳ ಬಳಿಕ ಮೊದಲ ಗಾಂಧಿಯೇತರ ನಾಯಕರೊಬ್ಬರು ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೇರುವುದು ಖಚಿತವಾಗಿದೆ.
ಅದರಂತೆ ಇಂದು ಎಐಸಿಸಿ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅಕ್ಟೋಬರ್ 17ರಂದು ಅಧ್ಯಕ್ಷೀಯ ಸ್ಥಾನಕ್ಕೆ ಮತದಾನ ನಡೆದಿದ್ದು, ಶೇ.96 ಮತದಾನ ಆಗಿತ್ತು.
ಗಾಂಧಿ ಕುಟುಂಬಕ್ಕೆ ಹತ್ತಿರುವಿರುವ ಹಾಗೂ ಪಕ್ಷದಲ್ಲಿ ಹೆಚ್ಚು ಬೆಂಬಲ ಹೊಂದಿರುವ ಖರ್ಗೆ ಅವರೇ ಜಯ ಗಳಿಸುವ ಸಾಧ್ಯತೆಯಿದೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಸ್ಯಾಮ್‌ಸಂಗ್ ಕಂಪೆನಿಯ ಆವಿಷ್ಕಾರ: ಕಚೇರಿ ಉದ್ಯೋಗಿಗಳಿಗಾಗಿ ಹೊಸ ಮೌಸ್