Advertisement
ಈ ಬೆಳವಣಿಗೆಯ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಸದ ಶಶಿತರೂರ್ ಮತ್ತು ದಿಗ್ವಿಜಯ್ ನಡುವೆ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತವಾಗಿದೆ. ಕಳೆದ ಶುಕ್ರವಾರ ಜಬಲ್ಪುರದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ದಿಗ್ವಿಜಯ್ ಅವರು, “ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದ ನಾಯಕತ್ವದ ಸೂಚನೆಯನ್ನು ಪಾಲಿಸುತ್ತೇನೆ’ ಎಂದಿದ್ದರು. ಬುಧವಾರ ಮತ್ತೆ ಈ ಬಗ್ಗೆ ಪ್ರಶ್ನಿಸಿದಾಗ, “ನಾನು ಈ ವಿಚಾರವನ್ನು ಯಾರ ಬಳಿಯೂ ಚರ್ಚಿಸಿಲ್ಲ.
ರಾಜಸ್ಥಾನ ಬಿಕ್ಕಟ್ಟು ಎಐಸಿಸಿ ಅಧ್ಯಕ್ಷ ಚುನಾವಣೆ ಮೇಲೆ ಕರಾಳ ಛಾಯೆ ಬೀರಿರುವಂತೆಯೇ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಹಿರಿಯ ನಾಯಕ ಎ.ಕೆ. ಆ್ಯಂಟನಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸೆ.30 ನಾಮಪತ್ರ ಸಲ್ಲಿಕೆಯ ಕೊನೇ ದಿನವಾಗಿರುವ ಕಾರಣ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಚುನಾವಣೆ ಕುರಿತು ಚರ್ಚಿಸಿರಬಹುದು ಎನ್ನಲಾಗಿದೆ.
Related Articles
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಶಶಿ ತರೂರ್ ಬುಧವಾರ ಉರ್ದು ಕವಿ ಸುಲ್ತಾನ್‌ಪುರಿ ಅವರ ಶಾಯರಿಯೊಂದನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. “ನಾನು ಏಕಾಂಗಿಯಾಗಿ ಪಯಣ ಆರಂಭಿಸಿದ್ದೆ. ಒಬ್ಬೊಬ್ಬರಾಗಿ ಅದರಲ್ಲಿ ಸೇರತೊಡಗಿ, ಈಗ ಅದು ದೊಡ್ಡ ಸಮೂಹವಾಗಿ ಮಾರ್ಪಟ್ಟಿದೆ’ ಎಂದು ಆ ಕವಿತೆಯಲ್ಲಿದೆ. ನಾಮಪತ್ರ ಸಲ್ಲಿಸಲಿರುವ ತಮಗೆ ದೊಡ್ಡಮಟ್ಟದ ಬೆಂಬಲವಿದೆ ಎಂದು ಅವರು ಈ ಮೂಲಕ ಪರೋಕ್ಷವಾಗಿ ಹೇಳಿದ್ದಾರೆ.
Advertisement
ರಾಹುಲ್‌ರನ್ನು ಕಂಡು ಖುಷಿಯಿಂದ ಕಣ್ಣೀರಿಟ್ಟಳು!ಭಾರತ್ ಜೋಡೋ ಯಾತ್ರೆಯ 18ನೇ ದಿನವಾದ ಬುಧವಾರ ರಾಹುಲ್ ಗಾಂಧಿ ಅವರು ಕೇರಳದ ಪಾಡಿಯ ಪಾಂಡಿಕ್ಕಾಡ್ ಶಾಲೆಯಿಂದ ನಡಿಗೆ ಆರಂಭಿಸಿದ್ದಾರೆ. ಈ ವೇಳೆ, ಅಲ್ಲಿಗೆ ಬಂದಿದ್ದ ಬಾಲಕಿಯೊಬ್ಬಳು, ರಾಹುಲ್‌ರನ್ನು ನೋಡುತ್ತಲೇ ಅತೀವ ಖುಷಿಯಿಂದ ಕಣ್ಣೀರಿಟ್ಟ ಘಟನೆ ನಡೆಯಿತು. ಅಳಲು ಆರಂಭಿಸಿದ ಅವಳನ್ನು ರಾಹುಲ್ ಆಲಿಂಗಿಸಿಕೊಂಡು ಸಂತೈಸಿದ್ದೂ ಕಂಡುಬಂತು. ನನಗಂತೂ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿಲ್ಲ. ಮುಂದಿನ ವರ್ಷವೇ ಮಧ್ಯಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆ ಇರುವ ಕಾರಣ, ನಾನು ರಾಜ್ಯದ ಕಡೆಗೆ ಗಮನ ಹರಿಸಬೇಕಿದೆ.
– ಕಮಲ್‌ನಾಥ್, ಮಧ್ಯಪ್ರದೇಶ ಮಾಜಿ ಸಿಎಂ