Advertisement

ಎಐಡಿಎಂಕೆ ಎರಡೂ ಬಣಗಳ ವಿಲೀನ ಸನ್ನಿಹಿತ?

07:00 AM Aug 11, 2017 | Team Udayavani |

ಚೆನ್ನೈ: ಜಯಲಲಿತಾ ಅವರ ನಿಧನದ ಬಳಿಕದ ವಿದ್ಯಮಾನಗಳ ನಂತರ ತಮಿಳುನಾಡು ಮತ್ತೂಂದು ಸುತ್ತಿನ ನಾಟಕೀಯ ಬೆಳವಣಿಗೆ ಗಳಿಗೆ ಸಾಕ್ಷಿಯಾಗಿದೆ. ಜಯಾ ಆಸ್ಪತ್ರೆ ಸೇರಿದಾ ಗಿನಿಂದಲೂ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದ ಶಶಿಕಲಾ ನಟರಾಜನ್‌ ಮತ್ತು ಟಿ.ಟಿ.ವಿ. ದಿನಕರನ್‌ ಅವರನ್ನೇ ಪಕ್ಷದಿಂದ ದಬ್ಬುವ ಯತ್ನಗಳು ಇದೀಗ ನಡೆಯುತ್ತಿವೆ. ಅಚ್ಚರಿಯೆಂ ದರೆ, ಶಶಿಕಲಾರಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೇರಿದ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಇದಕ್ಕೆ ಮುನ್ನುಡಿ ಬರೆಯಲಾಗಿದೆ.

Advertisement

ಶಶಿಕಲಾ ಆಗಮನದಿಂದ ಎರಡು ಹೋಳಾ ಗಿದ್ದ ಎಐಎಡಿಎಂಕೆ ಮತ್ತೆ ಒಂದಾಗಲು ಹೊರ ಟಿವೆ. ಮುಂದಿನ ವಾರವೇ ಪಕ್ಷದ ಎರಡೂ ಬಣ ಗಳು ವಿಲೀನವಾಗುವ ಸಾಧ್ಯತೆಯಿದೆ. ಮಾಜಿ ಸಿಎಂ ಪನ್ನೀರ್‌ಸೆಲ್ವಂ ನೇತೃತ್ವದ ಮತ್ತೂಂದು ಬಣವು, ವಿಲೀನವಾಗಬೇಕಿದ್ದರೆ ಶಶಿಕಲಾ ಮತ್ತು ದಿನಕರನ್‌ರನ್ನು ಪಕ್ಷದಿಂದ ದೂರವಿಡಬೇಕು ಎಂಬ ಷರತ್ತು ಹಾಕಿದ್ದರು. ಗುರುವಾರ ಸಿಎಂ ಪಳನಿ ನೇತೃತ್ವದಲ್ಲಿ ನಡೆದ ಸಭೆಯ ನಿರ್ಧಾರಗಳು ಪನ್ನೀರ್‌ ಷರತ್ತನ್ನು ಒಪ್ಪಿಕೊಂಡಿರುವುದರ ಸುಳಿವು ನೀಡಿದೆ. ಅಂದರೆ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವರ ನೇಮಕ ತಾತ್ಕಾಲಿಕವಾಗಿದ್ದು, ಹೊಸ ಅಧ್ಯಕ್ಷರ ನೇಮಕವಾ ದೊಡನೆ ಶಶಿಕಲಾ ಅಧಿಕಾರ ಕಳೆದುಕೊಳ್ಳುತ್ತಾರೆ ಮತ್ತು ಉಪಪ್ರಧಾನ ಕಾರ್ಯದರ್ಶಿ ದಿನಕರನ್‌ ಮುಂದುವರಿಕೆಯೂ ಕಾನೂನುಬಾಹಿರವಾಗು ತ್ತದೆ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ದಿನಕರನ್‌ ಬಣ, “ಪಳನಿಸ್ವಾಮಿ ಅತಿದೊಡ್ಡ ದ್ರೋಹ ಬಗೆಯುತ್ತಿದ್ದಾರೆ’ ಎಂದಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಶೀಘ್ರವೇ ಎರಡೂ ಬಣಗಳು ಒಂದಾಗುತ್ತವೆ. ಮಾತ್ರವಲ್ಲ, ಪಳನಿಸ್ವಾಮಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಪನ್ನೀರ್‌ ಅವರು ಡಿಸಿಎಂ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next