Advertisement

AIADMK ಯಿಂದಲೂ ಮೇಕೆದಾಟುಗೆ ಕ್ಯಾತೆ:ಪ್ರಣಾಳಿಕೆಯಲ್ಲಿ ಏನೇನಿದೆ?

12:15 AM Mar 23, 2024 | Team Udayavani |

ಚೆನ್ನೈ: ದಿನಗಳ ಹಿಂದೆ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಕರ್ನಾಟಕ ಸರಕಾರ ಮೇಕೆದಾಟುವಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಅಣೆಕಟ್ಟು ಯೋಜನೆಗೆ ತಕರಾರು ತೆಗೆದಿತ್ತು. ಇದೀಗ ಆ ರಾಜ್ಯದ ಪ್ರಮುಖ ವಿಪಕ್ಷ ಎಐಎಡಿಎಂಕೆ ಕೂಡ ಯೋಜನೆಯ ವಿರುದ್ಧ ನಿಲುವು ಪ್ರಕಟಿಸಿದೆ.

Advertisement

ಶುಕ್ರವಾರ ಚೆನ್ನೈಯಲ್ಲಿ ಬಿಡುಗಡೆಯಾಗಿರುವ ಆ ಪಕ್ಷದ ಪ್ರಣಾಳಿಕೆಯಲ್ಲಿ ಈ ಅಂಶವನ್ನು ತಮಿಳುನಾಡಿನ ಪ್ರಮುಖ ವಿಪಕ್ಷವಾಗಿರುವ ಎಐಎಡಿಕೆ ಉಲ್ಲೇಖಿಸಿದೆ. ಪ್ರಮುಖವಾಗಿ ಕಾವೇರಿ-ಗುಂಡಾರ್‌-ವೈಗೈ, ಗೋದಾವರಿ-ಕಾವೇರಿ ನದಿ ಜೋಡಣೆಗೂ ಆಗ್ರಹಿಸಿದೆ. ಮೊನ್ನೆಯಷ್ಟೇ ಪ್ರಕಟವಾದ ಡಿಎಂಕೆ ಪ್ರಣಾಳಿಕೆಯಲ್ಲೂ ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಹೇಳಲಾಗಿತ್ತು.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಇತರರು ಚೆನ್ನೈಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಆರ್ಥಿಕವಾಗಿ ಹಿಂದುಳಿದ ಪ್ರತೀ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ತಿಂಗಳಿಗೆ 3,000 ರೂ. ಸಹಾಯಧನ, ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಸರಕಾರದ ನಡುವೆ ತಿಕ್ಕಾಟ ನಡೆಯುತ್ತಿರುವುದರಿಂದ ಮುಖ್ಯಮಂತ್ರಿ ಜತೆಗೆ ಸಮಾಲೋಚನೆ ನಡೆಸಿದ ಬಳಿಕವೇ ನಡೆಸಬೇಕು ಎಂದೂ ಪ್ರಣಾಳಿಕೆಯಲ್ಲಿ ಆಗ್ರಹಿಸಲಾಗಿದೆ. ಇದರ ಜತೆಗೆ ನೀಟ್‌ಗೆ ಪರ್ಯಾಯ ಪರೀಕ್ಷೆ, ಚೆನ್ನೈಯಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸೇರಿದಂತೆ ಒಟ್ಟು 113 ಭರವಸೆಗಳನ್ನು ನೀಡಿದ್ದೇವೆ ಎಂದು ವಾಗ್ಧಾನ ಮಾಡಿದೆ.

ಡಿಎಂಕೆ-ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಸಾಮ್ಯತೆ!
ತಮಿಳುನಾಡಿನ ಆಡಳಿತ ಮತ್ತು ವಿಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಪ್ರಕಟಿಸಿರುವ ಪ್ರಣಾಳಿಕೆಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಕರ್ನಾಟಕದ ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ವಿರೋಧ, ಬಡ ಕುಟುಂಬದ ಮುಖ್ಯಸ್ಥೆಗೆ ಮಾಸಿಕ ಆರ್ಥಿಕ ನರೆವು, ಚೆನ್ನೈಯಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪನೆ, ರಾಜ್ಯಪಾಲರ ನೇಮಕ, ಶೈಕ್ಷಣಿಕ ಸಾಲಮನ್ನಾ, ಎನ್‌ಇಪಿ ರದ§ತಿ, ಸಿಎಎ ರದ್ಧತಿ, ಹಿಂದಿ ಹೇರಿಕೆಗೆ ವಿರೋಧ ಇತ್ಯಾದಿ ಭರವಸೆಗಳೂ ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿರು ವುದು ಸೋಜಿಗವಾಗಿದೆ.

ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಏನೇನಿದೆ?
ಚೆನ್ನೈಯಲ್ಲಿ ಚಳಿಗಾಲದ ಸಂಸತ್‌ ಅಧಿವೇಶನ
ಹಿಂದಿ ಹೇರಿಕೆಗೆ ವಿರೋಧ
ಮುಲ್ಲಪೆರಿಯಾರ್‌ ವಿವಾದ ಬಗೆಹರಿಸುವುದು
ದಿನದ 24 ಗಂಟೆಯೂ ತ್ರಿಫೇಸ್‌ ವಿದ್ಯುತ್‌
ಶೈಕ್ಷಣಿಕ ಸಾಲ ಸಂಪೂರ್ಣ ಮನ್ನಾ
ಕೇಂದ್ರದ ಯೋಜನೆಗಳಲ್ಲಿ ಕೇಂದ್ರ ಪಾಲು ಹೆಚ್ಚಳ
ನೀಟ್‌ಗೆ ಪರ್ಯಾಯ ಪರೀಕ್ಷೆ
ಹೈವೇಗಳಲ್ಲಿ ಬೈಕ್‌ಗಳಿಗೆ ಪ್ರತ್ಯೇಕ ಲೇನ್‌
ಎನ್‌ಇಪಿ ಬದಲಿಗೆ ಹೊಸ ಶಿಕ್ಷಣ ನೀತಿ
ಸಿಎಎ ವ್ಯಾಪ್ತಿಗೆ ತಮಿಳು ಶ್ರೀಲಂಕನ್‌. ಮುಸ್ಲಿಮರು
ಉದ್ಯೋಗ ಖಾತ್ರಿ ವೇತನ ಹೆಚ್ಚಳಕ್ಕೆ ಕ್ರಮ

Advertisement
Advertisement

Udayavani is now on Telegram. Click here to join our channel and stay updated with the latest news.

Next