Advertisement
ಆಸ್ಟಿನ್‌ನಲ್ಲಿ ಟೆಕ್ಸಾಸ್ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳು ಇಂತಹ ದೊಂದು ಸಾಧ್ಯತೆಯನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ. “ಎಐ ಪ್ರಪಂಚದಲ್ಲಿ ಈ ಸಂಶೋ ಧನೆಯು ದೊಡ್ಡ ಮುನ್ನಡಿ ಬರೆಯಲಿದೆ. ಮಾನವನ ಆಲೋಚನೆಗಳನ್ನು ಎಐ ಟೆಕ್ಸ್ಟ್ ರೂಪಕ್ಕೆ ಪರಿವರ್ತಿಸುತ್ತದೆ. ಇದು ಶೇ.82ರಷ್ಟು ಕರಾರುವಾಕ್ಕಾಗಿ ಇರುತ್ತದೆ ಎಂಬುದನ್ನು ಅಧ್ಯಯನ ನಿರೂಪಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆಯು ಮಾನವರ ಉದ್ಯೋಗಗಳನ್ನು ಕಸಿಯುತ್ತದೆ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಇದೇ ವೇಳೆ ಸ್ಟಾರ್ಟ್‌ಅಪ್ ಕಂಪೆನಿ “ಜಿನೀಸ್’ ಸಿಇಒ ಅಕಾಶ್ ನಿಗಮ್ ಅವರು ತಮ್ಮ ಉದ್ಯೋಗಿಗಳ ಚಾಟ್‌ಜಿಪಿಟಿ ಸಬ್‌ಸ್ಕ್ರಿಪ್ಶನ್‌ಗೆ ಪ್ರತೀ ತಿಂಗಳು 1.96 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. “ಇದರಿಂದ ಉದ್ಯೋಗಿಗಳ ಉತ್ಪಾದಕತೆ ಹೆಚ್ಚಿದೆ’ ಎಂದು ಆಕಾಶ್ ಹೇಳಿದ್ದಾರೆ.