Advertisement
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕೃತಕ ಬುದ್ಧಿಮತ್ತೆ ಕುರಿತಾದ ಜಾಗತಿಕ ಪಾಲುದಾರಿಕೆ ಶೃಂಗಸಭೆಯಲ್ಲಿ ಪ್ರಧಾನಿ ಪಾಲ್ಗೊಂಡು ಮಾತನಾಡಿದರು. ಈ ವೇಳೆ 21ನೇ ಶತಮಾನದ ಅಭಿವೃದ್ಧಿಯ ಅತ್ಯಂತ ಪ್ರಬಲ ಅಸ್ತ್ರವಾಗಿ ಎಐ ಬಳಕೆಯಾಗಬಲ್ಲದು! ಇದೇ ವೇಳೆ 21ನೇ ಶತಮಾನದ ಅಂತ್ಯಕ್ಕೂ ಎಐ ಅಸ್ತ್ರವಾಗಬಲ್ಲದು ಎಂದಿದ್ದಾರೆ. ಡೀಪ್‌ಫೇಕ್, ಸೈಬರ್ ಭದ್ರತೆ, ದತ್ತಾಂಶಗಳ ಕಳವು ಹೊರತಾಗಿಯೂ ಭಯೋತ್ಪಾದಕರ ಕೈಗೆ ಈ ಎಐ ಅಸ್ತ್ರ ಸಿಕ್ಕಿಬಿಟ್ಟರೆ ಅದು ಜಗತ್ತಿಗೆ ಮಾರಕವಾಗಿಬಿಡುತ್ತದೆ. ಅದಾಗದಿ ರಲು ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕಿದೆ. ಇಂಥ ಎಲ್ಲ ಸಂಭಾವ್ಯ ಸಮಸ್ಯೆಗಳನ್ನು ಪರಿಹರಿಸಲು ಈ ಶೃಂಗದಲ್ಲಿ ದೊರೆಯುವ ಸಲಹೆಗಳು, ಆಲೋಚನೆಗಳು ನಮಗೆ ಸಹಾಯ ಮಾಡಲಿದೆ ಎಂದಿದ್ದಾರೆ. Advertisement
AI: ಭಯೋತ್ಪಾದಕರಿಗೆ ಎಐ ದಕ್ಕಿದರೆ ಅಪಾಯ- ಪ್ರಧಾನಿ ನರೇಂದ್ರ ಮೋದಿ
12:30 AM Dec 13, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.