Advertisement

AI News: ಅನುವಂಶಿಕ ಅಧ್ಯಯನಕ್ಕೆ ಎಐ

11:09 PM Sep 20, 2023 | Team Udayavani |

ಮಾನವ ಅನುವಂಶಿಯ ತಳಿ ಕುರಿತಾದ ಅಧ್ಯಯನದಲ್ಲಿ ಕೃತಕ ಬುದ್ಧಿಮತ್ತೆ ಇನ್ನು ಮುಂದೆ ಬಹುದೊಡ್ಡ ಪಾತ್ರ ವಹಿಸಲಿದೆ. ಯಾವ ಅನುವಂಶಿಕ ರೂಪಾಂತರ ಉಪದ್ರವಿ, ನಿರುಪದ್ರವಿ ಎಂಬುದರ ಪತ್ತೆಯ ಜತೆಗೆ ಯಾವ ತಳಿಗಳ ಸಮ್ಮಿಶ್ರಣ ಯಾವ ರೋಗಗಳಿಗೆ ಕಾರವಾಗಬಹುದು ಎಂಬುದನ್ನು ಪತ್ತೆಹಚ್ಚಲು ಗೂಗಲ್‌ನ “ಡೀಪ್‌ಮೈಂಡ್‌’ ಎಐ ಸಂಸ್ಥೆಯು ತನ್ನ ಎಐ ಮಾಡಲ್‌ “ಆಲ್ಫಾ ಮಿಸ್ಸೆನ್ಸ್‌’ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿದೆ.

Advertisement

ಈಗಾಗಲೇ ಈ ಅಧ್ಯಯನಕ್ಕೆ ಸಂಬಂಧಿಸಿದ ಕ್ಯಾಟಲಾಗ್‌ ಅನ್ನೂ ಅಭಿವೃದ್ಧಿ ಪಡಿಸಿದೆ. ಇದು ರೋಗದ ಪತ್ತೆ ಮತ್ತು ಚಿಕಿತ್ಸೆಗಳಿಗೆ ಸಹಾಯಕವಾಗುವ ಸಂಶೋಧನೆಗಳನ್ನು ವೇಗಗೊಳಿಸಲು ಸಹಕಾರಿಯಾಗಲಿದ್ದು, ವೈದ್ಯಕೀಯ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯ ಅಳವಡಿಕೆ ಉಪಕಾರಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಅಭಿಪ್ರಾಯಪಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next