Advertisement

Assembly;ವಿಧಾನಸೌಧದಲ್ಲಿ ಇನ್ನು ಶಾಸಕರ ಮೇಲೆ ಕಣ್ಣಿಡಲಿರುವ AI ಕೆಮರಾಗಳು

06:38 PM Jul 15, 2024 | Team Udayavani |

ಬೆಂಗಳೂರು: ಸೋಮವಾರ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಪ್ರಾರಂಭಗೊಂಡಿದ್ದು ವಿಶೇಷವಾಗಿ ಮುಖ ಗುರುತಿಸುವಿಕೆ ತಂತ್ರಜ್ಞಾನದೊಂದಿಗೆ ಕೃತಕ ಬುದ್ಧಿಮತ್ತೆ-ಸಕ್ರಿಯಗೊಳಿಸಿದ(Artificial Intelligence) ಕೆಮರಾಗಳನ್ನು ಅಳವಡಿಲಾಗಿದೆ. ಇದು ಸದಸ್ಯರ ಆಗಮನ ಮತ್ತು ನಿರ್ಗಮನ ಸಮಯ ಮತ್ತು ಸದನದಲ್ಲಿ ಅವರು ಇರುವ ಅವಧಿಯನ್ನು ದಾಖಲಿಸುತ್ತದೆ.

Advertisement

ಕೆಜಿಎಫ್ ನ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ ಅವರು ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ಇಂದು ಆರಂಭವಾದ ಮಳೆಗಾಲದ ಅಧಿವೇಶನಕ್ಕೆ ವಿಧಾನಸಭೆಗೆ ಆಗಮಿಸಿದ ಮೊದಲ ಶಾಸಕಿಯಾಗಿ ಕೆಮರಾದಲ್ಲಿ ದಾಖಲಾಗಿದ್ದಾರೆ. ತಿಪಟೂರಿನ ಕಾಂಗ್ರೆಸ್‌ ಶಾಸಕ ಷಡಕ್ಷರಿ ನಿರ್ಗಮಿಸಿದ ಮೊದಲ ಶಾಸಕರಾಗಿದ್ದಾರೆ.

ಸ್ಪೀಕರ್ ಯು.ಟಿ. ಖಾದರ್ ಅವರು, ಕೋರಂ ಗಂಟೆ ಬಾರಿಸುವ ಮುನ್ನವೇ ವಿಧಾನಸಭೆಗೆ ಬರುವ ಶಾಸಕರನ್ನು ಗುರುತಿಸಿ ಅವರ ಹೆಸರನ್ನು ಹೇಳಿ ಶ್ಲಾಘಿಸುವ ಪರಿಪಾಠ ರೂಢಿಸಿಕೊಂಡಿದ್ದಾರೆ.

“ಕೆಲವು ಹಿರಿಯ ಸದಸ್ಯರಾದ ಆರಗ ಜ್ಞಾನೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಕೆಲವು ಹಿರಿಯ ಸಚಿವರು, ಕೆಲವು ಶಾಸಕರು ಸ್ವಲ್ಪ ತಡವಾಗಿ ಬಂದರೂ, ಸಂಜೆ ಆರು ಅಥವಾ ಎಂಟರವರೆಗೆ ಕಲಾಪದಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಯಾರೂ ಅದನ್ನು ಗಮನಿಸಲಿಲ್ಲ.ಇದರಿಂದ ಅನ್ಯಾಯವಾಗಿದೆ’ ಎಂದು ಸ್ಪೀಕರ್ ಹೇಳಿದರು.

“ನಾವು ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೆಮರಾಗಳನ್ನು ಅಳವಡಿಸಿದ್ದೇವೆ. ಒಬ್ಬ ಸದಸ್ಯರು ಯಾವ ಸಮಯದಲ್ಲಿ ಬರುತ್ತಾರೆ/ ಹೋಗುತ್ತಾರೆ ಮತ್ತು ಅವರು ಎಷ್ಟು ಸಮಯದವರೆಗೆ ಅಸೆಂಬ್ಲಿಯಲ್ಲಿ ಹಾಜರಿದ್ದರು ಎನ್ನುವುದನ್ನು ಅದು ಗಮನಿಸುತ್ತದೆ. ದಿನದ ಅಂತ್ಯದ ವೇಳೆಗೆ ವಿಧಾನಸಭೆ ಕಾರ್ಯದರ್ಶಿ ವ್ಯವಸ್ಥೆಗೆ ಈ ಬಗ್ಗೆ ಡೇಟಾ ಬರುತ್ತದೆ” ಎಂದು ತಿಳಿಸಿದರು.

Advertisement

ಅಧಿಕಾರಿಗಳ ಪ್ರಕಾರ, ಈ ಉಪಕ್ರಮ ಶಾಸಕರ ಹಾಜರಾತಿ ಮತ್ತು ಅಧಿವೇಶನದಲ್ಲಿ ಅವರ ಭಾಗವಹಿಸುವಿಕೆಯನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿದೆ.

ವಿಧಾನಸೌಧಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ, ವಿಧಾನಸೌಧದ ಕಾರ್ಯದರ್ಶಿ, ವಿಧಾನಸೌಧದ ಪಶ್ಚಿಮ ದ್ವಾರದ ಗೇಟ್‌ಗಳನ್ನು ಮೊದಲ ಹಂತದಲ್ಲಿ ನವೀಕರಿಸಲಾಗಿದೆ, ಕಬ್ಬಿಣದ ಗ್ರಿಲ್ಡ್ ಗೇಟ್‌ಗಳನ್ನು ತೆಗೆದು ಕೆತ್ತನೆಯ ದೊಡ್ಡ ರೋಸ್‌ವುಡ್ ಬಾಗಿಲಿನಿಂದ ಬದಲಾಯಿಸಲಾಗಿದೆ. ಇಂದು(ಸೋಮವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಪೀಠಿಕೆ ಇರುವ ಫಲಕದೊಂದಿಗೆ ಉದ್ಘಾಟಿಸಿದರು.

ಸಭಾಧ್ಯಕ್ಷರು ಮಾತನಾಡಿ, ‘ನಮ್ಮ ವಿಧಾನಸೌಧ ಕಟ್ಟಡಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವವಿದೆ. ವಿಧಾನಸೌಧಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಿಯೋಗಗಳು ಮತ್ತು ಪ್ರವಾಸಿಗರು ಬರುತ್ತಾರೆ. ಅದನ್ನು ಒಳಗಿನಿಂದ ಮತ್ತು ಹೊರಗಿಂದ ಉತ್ತಮ ಮತ್ತು ಗೌರವಯುತವಾಗಿ ಕಾಣುವಂತೆ ಮಾಡುವುದು ನಮ್ಮ ಕರ್ತವ್ಯ. ಇದು ಮೊದಲ ಹಂತವಾಗಿದೆ, ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ, ನಾನು ಸದಸ್ಯರ ಸಲಹೆಗಳನ್ನು ಕೇಳುತ್ತೇನೆ’ ಎಂದರು. ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಇತರ ಶಾಸಕರು ಸಭಾಧ್ಯಕ್ಷರನ್ನು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next