Advertisement

AI News: ಲೆಕ್ಕಪರಿಶೋಧನೆಗೆ AI ನೆರವು

08:15 PM Aug 17, 2023 | Team Udayavani |

ಎಂಜಿನಿಯರಿಂಗ್‌, ಮಾರ್ಕೆಟಿಂಗ್‌ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಈಗಾಗಲೇ ವ್ಯಾಪಿಸಿ ಉದ್ಯೋಗಿಗಳ ಹೊರೆ ಕಡಿಮೆ ಮಾಡಿರುವ ಕೃತಕ ಬುದ್ಧಿಮತ್ತೆ (ಎಐ), ಈಗ ಲೆಕ್ಕಪರಿಶೋಧಕರ(ಚಾರ್ಟಡ್‌ ಅಕೌಂಟೆಂಟ್ಸ್‌) ಹೆಗಲ ಮೇಲಿನ ಹೊರೆ ಕಡಿಮೆ ಮಾಡಲು ಸಜ್ಜುಗೊಳ್ಳುತ್ತಿದೆ. ಲೆಕ್ಕಾಚಾರದಲ್ಲಿ ಕಣ್ತಪ್ಪಿನಿಂದಾಗುವ ಲೋಪ ದೋಷಗಳನ್ನು ಪತ್ತೆಹಚ್ಚಿ, ನಿಖರ ಹಾಗೂ ಕ್ಷಿಪ್ರಗತಿಯಲ್ಲಿ ಲೆಕ್ಕ ಪರಿಶೋಧನೆ ಮಾಡಲು ಸಹಕರಿಸಲಿದೆ.

Advertisement

ಇಂಥದ್ದೊಂದು ಎಐ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ಲೆಕ್ಕಗಳನ್ನು ಪರಿಶೋಧಿಸಲು ದಿ ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ (ಐಸಿಎಐ) ತಯಾರಿ ನಡೆಸುತ್ತಿದ್ದು, ತಮ್ಮ ಸಿಬ್ಬಂದಿಗೂ ಎಐ ಜತೆಗೆ ಹೊಂದಿಕೊಳ್ಳಲು ಈಗಾಗಲೇ ತರಬೇತಿ ನೀಡುತ್ತಿರುವುದಾಗಿಯೂ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next