Advertisement

ಅಹಮದಾಬಾದ್‌ ಈಗ ವಿಶ್ವ ಪಾರಂಪರಿಕ ನಗರ!

03:45 AM Jul 10, 2017 | Harsha Rao |

ಹೊಸದಿಲ್ಲಿ: ದೇಶದ ಐತಿಹಾಸಿಕ ನಗರ ಅಹಮದಾಬಾದ್‌ ಇದೀಗ ಯುನೆಸ್ಕೋದ “ವಿಶ್ವ ಪಾರಂಪರಿಕ ನಗರ’ಗಳ ಪಟ್ಟಿ ಸೇರಿದ್ದು, ಪಾರಂಪರಿಕ ಪ್ರದೇಶಗಳನ್ನು “ಹೊರೆ’ ಎಂದು ಭಾವಿಸುವ ಸರಕಾರಗಳ ಮನಸ್ಥಿತಿ ಇನ್ನಾದರೂ ಬದಲಾಗ ಬೇಕಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. 15ನೇ ಶತಮಾನದಲ್ಲಿ ಸುಲ್ತಾನ್‌ ಅಹಮದ್‌ ಶಾರಿಂದ ಸ್ಥಾಪನೆಗೊಂಡ ಗುಜರಾತ್‌ನ ಅಹಮದಾಬಾದ್‌ ನಗರ 600 ವರ್ಷಗಳ ಇತಿಹಾಸ ಹೊಂದಿದ್ದು, ಯುನೆಸ್ಕೋ ಪಾರಂಪರಿಕ ನಗರಗಳ ಪಟ್ಟಿ ಸೇರಿದ ಭಾರತದ ಮೊದಲ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಮೂಲಕ ಪ್ಯಾರಿಸ್‌, ವಿಯೆನ್ನಾ, ಕೈರೋ, ಬ್ರುಸೆಲ್ಸ್‌, ರೋಮ್‌ ಮತ್ತು ಎಡಿನ್‌ಬರ್ಗ್‌ಗಳ ಜತೆ ಗುರುತಿಸಿಕೊಂಡಿರುವ ಅಹಮದಾ ಬಾದ್‌, ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next