ಮುಂಬೈ: ಮುಂದಿನ ಸೀಸನ್ ನ ಐಪಿಎಲ್ ಗೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ಎರಡು ಹೊಸ ತಂಡಗಳು ತಮಗೆ ಬೇಕಾದ ಮೂವರು ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಈ ಮಧ್ಯೆ ಅಹಮದಾಬಾದ್ ಮೂಲದ ಫ್ರಾಂಚೈಸಿಯು ತನ್ನ ಆಯ್ಕೆಯನ್ನು ಅಂತಿಮಗೊಳಿಸಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಹೈದರಾಬಾದ್ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇವರೊಂದಿಗೆ ಹೈದರಾಬಾದ್ ತಂಡದಲ್ಲಿದ್ದ ಸ್ಟಾರ್ ಬೌಲರ್ ರಶೀದ್ ಖಾನ್ ಅವರನ್ನೂ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ನೈಜ ಘಟನೆಯ ಸುತ್ತ ‘ಅಂಬುಜಾ’: ಮದುವೆ ನಂತ್ರ ಮತ್ತೆ ಸಿನಿಮಾದತ್ತ ಶುಭಾ ಚಿತ್ತ
ಅದಲ್ಲದೆ ಕೆಕೆಆರ್ ಪರವಾಗಿ ಆಡುತ್ತಿದ್ದ ಯುವ ಆಟಗಾರ ಶುಭ್ಮನ್ ಗಿಲ್ ಅವರನ್ನೂ ತಂಡ ಆಯ್ಕೆ ಮಾಡಿಕೊಂಡಿದೆ. ಗಿಲ್ ಅವರನ್ನು ಮೂರನೇ ಆಯ್ಕೆಯ ಆಟಗಾರನಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಎರಡು ಹೊಸ ಫ್ರಾಂಚೈಸಿಗಳಿಗೆ (ಲಕ್ನೋ ಮತ್ತು ಅಹಮದಾಬಾದ್) ಆಕ್ಷನ್ ಗೂ ಮೊದಲೇ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ.
ಅಹಮದಾಬಾದ್ ಫ್ರಾಂಚೈಸಿಯು ಆಶಿಷ್ ನೆಹ್ರಾ, ಗ್ಯಾರಿ ಕರ್ಸ್ಟನ್ ಅವರನ್ನು ಕೋಚ್ ಗಳಾಗಿ ಆಯ್ಕೆ ಮಾಡಿದೆ. ಸದ್ಯ ಸರ್ರೆ ತಂಡದ ಮುಖ್ಯ ಕೋಚ್ ವಿಕ್ರಮ್ ಸೋಲಂಕಿ ಅವರನ್ನು ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಿಕೊಂಡಿದೆ.