Advertisement

“ಸಂಘಟನೆ ಮುಂದೆ ಹಣ ಬಲ ಗೆಲ್ಲದು’

05:09 PM Apr 03, 2019 | Vishnu Das |

ಬೆಳ್ತಂಗಡಿ: ಈ ಬಾರಿಯ ಚುನಾವಣೆಯಲ್ಲಿ ಕನಕಪುರದ ಹಣಬಲದ ಬುಗರಿಯಾಟ ದಕ್ಷಿಣ ಕನ್ನಡ ಜಿಲ್ಲೆಯ ನಾರಾಯಣ ಗುರು ನೆಲದಲ್ಲಿ ಸೋಲು ಕಾಣಲಿದೆ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪುಜಾರಿ ಹೇಳಿದ್ದಾರೆ.

Advertisement

ಮಂಗಳವಾರ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಈ ಬಾರಿಯ ಚುನಾವಣೆ ಹಣಬಲ ಮತ್ತು ಸಂಘಟನೆ ಮಧ್ಯೆ ಸ್ಪರ್ಧೆ. ಡಿ.ಕೆ. ಶಿವಕುಮಾರ್‌ ಹಣ ಬಲದ ಮುಂದೆ ಬಿಜೆಪಿ ಸಂಘಟಟಿತ ಹೋರಾಟದಲ್ಲಿ ನಳಿನ್‌ 2 ಲಕ್ಷ ಮತಗಳ ಅಂತರದ ಗೆಲುವು ಸಾಧಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯ ಬ್ಯಾಂಕ್‌ ವಿಲೀನ ಕುರಿತು ಕಾಂಗ್ರೆಸ್‌ ನಾಯಕರು ಬಿಜೆಪಿ ನಾಯಕ ರತ್ತ ಕೈತೋರುತ್ತಿದ್ದಾರೆ. ಆದರೆ 1967ರಲ್ಲಿ ಕಾಂಗ್ರೆಸ್‌ ಸರಕಾರ 16 ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿತ್ತು. 1980ರಲ್ಲಿ ವಿಜಯ ಬ್ಯಾಂಕ್‌ ಸೇರಿದಂತೆ 9 ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದೆ. ಹಿಂದೆ ವಿಜಯ ಬ್ಯಾಂಕ್‌ ಸಂಸ್ಥಾಪಕ ಸುಂದರರಾಮ್‌ ಶೆಟ್ಟಿಯವರ ಹೆಸರನ್ನು ಮಂಗಳೂರಿನ ರಸ್ತೆಗೆ ಇಡಬೇಕೆಂದಾಗ ತಡೆ ಒಡ್ಡಿದವರು ಕಾಂಗ್ರೆಸ್‌ ಶಾಸಕರು. ಡಿಕೆಶಿ ಇಂದು ಬೆಜೆಪಿ ಮೇಲೆ ಆರೋಪ ಹೊರಿಸು ತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದರು.

ಮಂಡ್ಯದಲ್ಲಿ ಬೃಹನ್ನಳೆ ನಾಟಕ
ಅಂಬರೀಷ್‌ ಕಾಂಗ್ರೆಸ್‌ ನಾಯಕ ರಾಗಿದ್ದರು. ಅದೇ ಕಾಂಗ್ರೆಸ್‌ ಇಂದು ಮಂಡ್ಯದಲ್ಲಿ ಮಹಿಳೆಯನ್ನು ಎದುರಿಸ ಲಾಗದೆ ಮೂವರು ಸುಮಲತಾ ಹೆಸರಿನವರನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ರಣಹೇಡಿತನ ಪ್ರದರ್ಶಿಸುತ್ತಿದೆ ಎಂದವರು ಟೀಕಿಸಿದರು.

ಮೋದಿ ಐದು ವರ್ಷದ ಆಡಳಿತ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಕೋಮ ಸಂಘರ್ಷ ನಡೆದಿಲ್ಲ. ಇದನ್ನು ಅನೇಕ ಅಲ್ಪಸಂಖ್ಯಾಕ ಮುಖಂಡರು ಒಪ್ಪಿಕೊಂಡಿದ್ದಾರೆ. ಅದರಂತೆ ಪ್ರಥಮ ಬಾರಿಗೆ ರಾಷ್ಟ್ರಕ್ಕೆ ಸಮರ್ಥ ನಾಯಕತ್ವಕ್ಕಾಗಿ ಈ ಬಾರಿ ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂಬ ಮಾತು ಎಲ್ಲ ಕಡೆ ಕೇಳಿ ಬರುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next