Advertisement

ವಿಶ್ವಕಪ್‌ ಹಾಕಿ: ನಗದು ಬಹುಮಾನ ಘೋಷಣೆ

11:35 PM Dec 28, 2022 | Team Udayavani |

ಹೊಸದಿಲ್ಲಿ: ಮುಂಬರುವ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಆತಿಥೇಯ ಭಾರತ ತಂಡಕ್ಕೆ “ಹಾಕಿ ಇಂಡಿಯಾ’ ನಗದು ಬಹುಮಾನ ಘೋಷಿಸಿದೆ.

Advertisement

ವಿಶ್ವಕಪ್‌ ಹಾಕಿ ಚಾಂಪಿಯನ್‌ ಆಗಿ ಮೂಡಿಬಂದರೆ ತಂಡದ ಆಟಗಾರರಿಗೆ ತಲಾ 25 ಲಕ್ಷ ರೂ. ಹಾಗೂ ಬೆಂಬಲ ಸಿಬಂದಿಗೆ ತಲಾ 5 ಲಕ್ಷ ರೂ. ಬಹುಮಾನ ಕಾದಿದೆ. ರನ್ನರ್‌ ಅಪ್‌ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದರೆ ಆಟಗಾರರಿಗೆ ತಲಾ 15 ಲಕ್ಷ ರೂ. ಹಾಗೂ ಸಹಾಯಕ ಸಿಬಂದಿಗೆ ತಲಾ 3 ಲಕ್ಷ ರೂ. ಲಭಿಸಲಿದೆ.

ಕಂಚಿನ ಪದಕಕ್ಕೆ ಕ್ರಮವಾಗಿ 10 ಲಕ್ಷ ರೂ. ಹಾಗೂ 2 ಲಕ್ಷ ರೂ. ನಗದು ಬಹುಮಾನ ದೊರೆಯಲಿದೆ. ಡಿ. 24ರಂದು ಹಾಕಿ ಆಡಳಿತ ಮಂಡಳಿ ನಡೆಸಿದ ವರ್ಚುವಲ್‌ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಬುಧವಾರ ಇದರ ಅಧಿಕೃತ ಪ್ರಕಟನೆ ಹೊರಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next