Advertisement

ನೈಸರ್ಗಿಕ ಅವಘಡ ತಡೆಗೆ ಮುಂದಾಗಿ

06:33 AM Jun 11, 2020 | Lakshmi GovindaRaj |

ದೇವನಹಳ್ಳಿ: ಮುಂಗಾರು ಮಳೆ ಸಂದರ್ಭದಲ್ಲಿ ಉಂಟಾಗುವ ನೈಸರ್ಗಿಕ ಅವಘಡಗಳನ್ನು ತಕ್ಷಣದಲ್ಲಿ ನಿವಾರಿಸಲು ಅಧಿಕಾರಿಗಳು ಮುಂಜಾಗ್ರತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ತಿಳಿಸಿದರು. ತಾಲೂಕಿನ  ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಮುಂಗಾರು ಮಳೆ ಪ್ರಾರಂಭವಾಗಿದ್ದು ನೈಸರ್ಗಿಕ ಅವಘಡ ಸಂಭವಿಸುವ  ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರ-ಗ್ರಾಮೀಣ ಪ್ರದೇಶದ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಚರಂಡಿ ಮತ್ತು ನಾಲೆ ಸ್ವತ್ಛಗೊಳಿಸಬೇಕು. ಲೋಕೋಪಯೋಗಿ ಇಲಾಖೆ  ಧಿಕಾರಿಗಳು ತಮ್ಮ  ವ್ಯಾಪ್ತಿಯ ರಸ್ತೆಗಳನ್ನು ಪರಿಶೀಲಿಸಿ, ದುರಸ್ತಿ ಕಂಡು ಬಂದರೆ ಅಗತ್ಯ ಕ್ರಮಕೈಗೊಳ್ಳಬೇಕು.

ಅಪಾಯದ ಹಳೇ ಮರ, ಶಿಥಿಲ ಕಟ್ಟಡ ತೆರವುಗೊಳಿಸಬೇಕು. ಬೆಸ್ಕಾಂ ಅಧಿಕಾರಿಗಳ ಸಹಕಾರದೊಂದಿಗೆ ವಿದ್ಯುತ್‌ ತಂತಿ, ಕಂಬ  ಪರಿಶೀಲಿಸಿ, ಅಪಾಯಕಾರಿ ಕಂಬ ತೆರವುಗೊಳಿಸುವಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು. ತುರ್ತು ವೈದ್ಯಕೀಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಸೂಕ್ತ ಸಿದಟಛಿತೆ ಮಾಡಿಕೊಳ್ಳಬೇಕು. ಡೆಂಘೀ, ಚಿಕೂನ್‌ಗುನ್ಯಾದಂತಹ  ಸಾಂಕ್ರಾಮಿಕ ರೋಗ ತಡೆಗಟ್ಟಲು ಔಷಧ ಸಿಂಪಡಿಸಿ, ಸ್ವತ್ಛತೆ ಕಾಪಾಡಿಕೊಳ್ಳಲುಜನರಿಗೆ ಅರಿವು ಮೂಡಿಸಬೇಕು.

ಮೇವು ಸಂಗ್ರಹಣೆ, ಕಾಲು ಬಾಯಿ ಜ್ವರ ಲಸಿಕೆ ಸೇರಿ ಇನ್ನಿತರೆ ಅಗತ್ಯಗಳ ಬಗ್ಗೆ ಪೂರ್ವಸಿದತೆ  ಮಾಡಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್‌ ಕೆ.ನಾಯಕ್‌, ಜಿಲ್ಲಾ ಆರೋಗ್ಯ ಅಧಿಕಾರಿ ಮಂಜುಳಾ ದೇವಿ, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಡಿವೈಎಸ್‌ಪಿ ರಂಗಪ್ಪ, ಜಿಲ್ಲಾ ನಗರಾಭಿವೃದಿ ಯೋಜನಾ ನಿರ್ದೇಶಕಿ ಸುಮಾ, ಜಿಲ್ಲಾ -ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next