Advertisement

ಆಹಾರ್‌ ನಿಯೋಗದಿಂದ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಭೇಟಿ

04:17 PM Jul 28, 2017 | Team Udayavani |

ಮುಂಬಯಿ: ಆಹಾರ್‌ ನಿಯೋಗವೊಂದು ಉತ್ತರ ಮುಂಬಯಿ ಲೋಕಸಭಾ ಸದಸ್ಯ ಗೋಪಾಲ್‌ ಶೆಟ್ಟಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿ ಹವಾನಿಯಂತ್ರಿತ ಮತ್ತು ಹವಾನಿಯಂತ್ರಿವಲ್ಲದ ರೆಸ್ಟೋರೆಂಟ್‌ಗಳು, ಲಿಕ್ಕರ್‌ ಸಹಿತ ಹೊಟೇಲ್‌ ಉದ್ಯಮದ ಮೇಲೆ ಹೇರಲಾದ ಶೇ. 18 ರಷ್ಟು ಜಿಎಸ್‌ಟಿ ತೆರಿಗೆಯನ್ನು ಶೇ. 12ಕ್ಕೆ ಇಳಿಸುವಂತೆ ಕೋರಿ ಮನವಿ ಸಲ್ಲಿಸಿತು.

Advertisement

ಶೇ. 18ರಷ್ಟು ಜಿಎಸ್‌ಟಿ ಹೇರಿಕೆ ತುಂಬಾ ಅಧಿಕವಾಗಿದ್ದು, ಇದರಿಂದ ಹೊಟೇಲ್‌ ಉದ್ಯಮದ ಮೇಲೆ ಭಾರೀ ಪರಿಣಾಮ ಬಿದ್ದಿದೆ ಎಂದು ನಿಯೋಗವು ಸಚಿವರಿಗೆ ಮನದಟ್ಟು ಮಾಡಿತು. ಈ ಕುರಿತು ಗೋಪಾಲ್‌ ಶೆಟ್ಟಿ ಅವರು ಕೂಡಾ, ಹಣಕಾಸು ಸಚಿವರಿಗೆ ಸವಿವರವಾಗಿ ತಿಳಿಸಿದರು.

ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅರುಣ್‌ ಜೇಟಿÉ ಅವರು ಆ. 5ರಂದು ಜಿಎಸ್‌ಟಿ ಕೌನ್ಸಿಲ್‌ ಸಭೆ ನಡೆಯಲಿದ್ದು, ಅಲ್ಲಿ ಈ ವಿಷಯವನ್ನು ಪ್ರಸ್ತಾವಿಸುತ್ತೇವೆ. ಈ ಬಗ್ಗೆ ಮೊದಲೇ ತನ್ನ  ಗಮನಕ್ಕೆ ಬಂದಿರುವುದಾಗಿ ತಿಳಿಸಿದರು.  ಇದಕ್ಕೆ ಮೊದಲು ನಿಯೋಗವು ಹಣಕಾಸು ಖಾತೆಯ ರಾಜ್ಯ ಸಚಿವ ಅರ್ಜುನ್‌ ಮೇಘವಾಲ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ನಿಯೋಗದಲ್ಲಿ ಸಂಸದ ಗೋಪಾಲ್‌ ಶೆಟ್ಟಿ, ಆಹಾರ್‌ನ ಅಧ್ಯಕ್ಷ ಆದರ್ಶ್‌ ಶೆಟ್ಟಿ, ಮುಂಬಯಿ ಬಿಜೆಪಿ ಸಮಿತಿಯ ವಕ್ತಾರ ನಿರಂಜನ್‌ ಶೆಟ್ಟಿ, ಉದ್ಯಮಿ ಎಮಾಳ್‌ ಹರೀಶ್‌ ಶೆಟ್ಟಿ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next