Advertisement
ಭೂಮಿಪೂಜೆ ಪೂರ್ವಾಹ್ನ 11.30 ರಿಂದ 12.30ರ ವರೆಗೆ ನಡೆಯಲಿದ್ದು, ನೇರಪ್ರಸಾರ ಇರಲಿದೆ. ಈ ಸಂದರ್ಭ ರಾಮನಾಮ ಜಪ, ತಪ, ವಿಶೇಷ ಪೂಜೆಗಳನ್ನು ಮನೆಗಳಲ್ಲಿ ಹಾಗೂ ದೇಗುಲ, ಮಠ ಮಂದಿರಗಳಲ್ಲಿ ಪೂಜೆ ನೆರವೇರಲಿದೆ. ಅಂದು ವಾಹನಗಳಲ್ಲಿ ಭಗವಾಧ್ವಜ ಹಾರಿಸುವಂತೆಯೂ ಜನರಲ್ಲಿ ಮನವಿ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮತ್ತು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಆ. 4ರ ರಾತ್ರಿ 8ರಿಂದ ಆ. 6ರ ಬೆಳಗ್ಗೆ 6 ಗಂಟೆಯ ವರೆಗೆ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ. ರಾಮ ರಾಜ್ಯಕ್ಕೆ ಅಡಿಗಲ್ಲು
ಮಂದಿರ ನಿರ್ಮಾಣದ ಮೂಲಕ ರಾಮ ರಾಜ್ಯದ ಚಿಂತನೆಗೆ ದೇಶದಲ್ಲಿ ಅಡಿಗಲ್ಲು ಹಾಕುವ ಸುಯೋಗ ಈಗ ಬಂದಿದೆ. ಮಂದಿರಕ್ಕಾಗಿ ಬಲಿದಾನ ಗೈದವರ ಆತ್ಮಕ್ಕೆ ಪುಣ್ಯ ಪ್ರಾಪ್ತಿಯಾ ಗುವ ಕಾಲ ಸನ್ನಿಹಿತವಾಗಿದೆ.
ಡಾ| ಕಲ್ಲಡ್ಕ ಪ್ರಭಾಕರ ಭಟ್, ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರು