Advertisement
ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗೆ ಸೇರಿರುವ ಘಾಟಿನ ತಿರುವುಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಕೆಲವು ಅಪಾಯಕಾರಿ ತಿರುವುಗಳಲ್ಲಿ ಹಾಗೂ ಕಡಿದಾದ ಗುಡ್ಡ ಇರುವ ಜಾಗಗಳಲ್ಲಿ ಗುಣಮಟ್ಟದ ಕಾಕ್ರೀಟ್ ಕಾರ್ಯ ನಡೆಯುತ್ತಿದೆ.ಆಗುಂಬೆ ಘಾಟಿಯ ಪ್ರಮುಖ ಆಕರ್ಷಣೆಯ ಕೇಂದ್ರವಾದ ಸೂರ್ಯಾಸ್ತಮಾನ ಕೇಂದ್ರದಲ್ಲಿ 25 ಮೀಟರ್ ಕಾಕ್ರೀಟ್ ಹಾಕಲಾಗಿದ್ದು ಕ್ಯೂರಿಂಗ್ ಕೆಲಸ ನಡೆಯುತ್ತಿದೆ. ಕಾಕ್ರೀಟ್ ರಸ್ತೆಗೆ ನೀರು ಹಾಕುವ ಕ್ಯೂರಿಂಗ್ ಕೆಲಸಕ್ಕೆ ಕನಿಷ್ಠ 21 ದಿನಗಳು ನಡೆಯಬೇಕು. ಈ ಸಂದರ್ಭದಲ್ಲಿ ವಾಹನಗಳಿಗೆ ಸಂಚರಿಸಲು ಅವಕಾಶ ನೀಡಿದರೆ ರಸ್ತೆಗೆ ಧಕ್ಕೆಯಾಗುತ್ತದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು, ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಇನ್ನರೆಡು ದಿನಗಳಲ್ಲಿ ಬೈಕ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ರಸ್ತೆಯ ಸ್ಥಿತಿಗತಿಯನ್ನು ಪರಿಶೀಲಿಸಿ ಲಘು ವಾಹನಗಳಿಗೆ ಅವಕಾಶ ನೀಡಲಾಗುವುದು. ತುರ್ತುಸೇವೆಯ ಆ್ಯಂಬುಲೆನ್ಸ್‌ಗಳಿಗೆ ಕೆಲವೇ ದಿನಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂಬುದು ಹಲವರ ಆಗ್ರಹವಾಗಿದೆ.
Advertisement
ಕಾಮಗಾರಿ ವಿಳಂಬ; ಪ್ರವಾಸಿಗರಿಗೆ ಸಂಕಷ್ಟ
12:22 PM May 08, 2019 | Naveen |
Advertisement
Udayavani is now on Telegram. Click here to join our channel and stay updated with the latest news.