Advertisement

ಆಗುಂಬೆ ಘಾಟಿ: ರಸ್ತೆಗೆ ಮರ ಉರುಳಿ ಸಂಚಾರ ವ್ಯತ್ಯಯ

12:52 PM Jul 23, 2019 | sudhir |

ಹೆಬ್ರಿ: ವಿಪರೀತ ಮಳೆಯಿಂದ ಆಗುಂಬೆ ಘಾಟಿಯಲ್ಲಿ ಸೋಮವಾರ ಬೆಳಗ್ಗೆ ಮರವೊಂದು ರಸ್ತೆಗೆ ಉರುಳಿದ ಪರಿಣಾಮ ಕೆಲ ಹೊತ್ತು ಸಂಚಾರಕ್ಕೆ ಅನಾನುಕೂಲವಾಗಿದ್ದು ಕೊನೆಗೆ ಬಸ್‌ ಸಿಬಂದಿ ಹಾಗೂ ಪ್ರಯಾಣಿಕರು ಮರವನ್ನು ಎತ್ತಿ ರಸ್ತೆ ಬದಿ ಹಾಕಿ ಸಂಚಾರಕ್ಕೆ ಅನು ಮಾಡಿಕೊಟ್ಟ ಘಟನೆ ನಡೆದಿದೆ.

Advertisement

ಉಡುಪಿ ಜಿಲ್ಲಾ ವ್ಯಾಪ್ತಿಯ ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ರಸ್ತೆಗೆ ಅಡ್ಡಲಾಗಿ ಬೆಳಗ್ಗೆ ಸುಮಾರು 8 ಗಂಟೆ ಹೊತ್ತಿಗೆ ಮರವೊಂದು ಬಿದ್ದು ಸಂಚಾರ ಬಂದ್‌ ಆಗಿತ್ತು. ಬೆಳಗ್ಗೆನ ಸಮಾಯವಾದ್ದರಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹೋಗುವರ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ಮರಬಿದ್ದ ಜಾಗದಲ್ಲಿ ಕೇವಲ ದ್ವಿಚಕ್ರ ಹಾಗೂ ಲಘವಾಹನಗಳಿಗೆ ಮಾತ್ರ ಹೋಗಲು ಅವಕಾಶವಿದ್ದು ಬಸ್ಸು ಹಾಗೂ ಘನವಾಹನಗಳಿಗೆ ಸಂಚರಿಸಲು ಆಗುತ್ತಿರಲಿಲ್ಲ.

ಇನ್ನೂ ಇವೆ ಅಪಾಯಕಾರಿ ಮರಗಳು!

ಘಾಟಿಯ ಪ್ರತಿಯೊಂದು ತಿರುವಿನಲ್ಲೂ ರಸ್ತೆಗೆ ವಾಲಿರುವ ಅಪಾಯಕಾರಿ ಮರಗಳಿದ್ದು ಇಂದೋ ನಾಳೆಯೋ ರಸ್ತೆಗೆ ಉರುಳುವ ಪರಸ್ಥಿತಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಗಮನಹರಿಸಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಮುಂದಾಗುವ ಅನಾಹುತವನ್ನು ತಪ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಅತಂಕದಲ್ಲಿ ರಾತ್ರಿ ಘಾಟಿ ಸಂಚಾರ

Advertisement

ತಾತ್ಕಾಲಿಕವಾಗಿ ದುರಸ್ತಿಗೊಂಡ 7ನೇ ತಿರುವಿನ ಭಾಗದಲ್ಲಿ ರಾತ್ರಿ ಸಂಚಾರ ಕಷ್ಟಕರವಾಗಿದೆ. ಅಲ್ಲದೆ ಅಪಾಯಕಾರಿ ಮರಗಳು ರಸ್ತೆಗೆ ವಾಲಿರುವ ಕಾರಣ ಜೋರಾಗಿ ಗಾಳಿ-ಮಳೆ ಬರುತ್ತಿರುವ ಸಂದರ್ಭ ಅನಾಹುತ ಸಂಭವಿಸಿದಲ್ಲಿ ತುರ್ತಾಗಿ ಸಂಪರ್ಕಿಸಲು ಈ ಭಾಗದಲ್ಲಿ ಕೆಲವೊಂದು ಕಡೆ ಮೊಬೈಲ್ ನೆಟ್ವರ್ಕ್‌ ಕೂಡ ಇಲ್ಲ. ರಾತ್ರಿ ಸಮಯದಲ್ಲಿ ವಾಹನ ಸಂಚಾರ ವಿರಳವಾಗಿರುವುದರಿಂದ ಇಲಾಖೆ, ಜನಸಮಾನ್ಯರಿಗೆ ಈ ಬಗ್ಗೆ ಮಾಹಿತಿ ಸಿಗುವುದಿಲ್ಲ.

ಕಳೆದ ಮಳೆಗಾಲದಲ್ಲಿ ವಿಪರೀತ ಮಳೆಯಿಂದ ಆಗಂಬೆ ಘಾಟಿಯ 7ನೇ ತಿರುವು ಸಂಪೂರ್ಣ ಕುಸಿದಿದ್ದು ಸಂಚಾರ ಬಂದ್‌ ಆಗಿತ್ತು. ಈ ಪ್ರದೇಶಕ್ಕೆ ಕೇವಲ ಮರಳು ಚೀಲಗಳನ್ನು ಅಳವಡಿಸಿ ತಾತ್ಕಲಿಕ ದುರಸ್ತಿ ಮಾಡಿದ್ದು ಇದೇ ರೀತಿ ಮಳೆ ಸುರಿಯುತ್ತಿದ್ದರೆ ಮಣ್ಣು ಸಿಂಕ್‌ ಆಗಿ ಮತ್ತೆ ತಾತ್ಕಲಿಕ ತಡೆಗೋಡಯೂ ಕುಸಿಯುವ ಭೀತಿಯಲ್ಲಿದೆ.

ತಡೆಗೋಡೆ ಕುಸಿಯುವ ಸಾಧ್ಯತೆ

ಕಳೆದ ಮಳೆಗಾಲದಲ್ಲಿ ವಿಪರೀತ ಮಳೆಯಿಂದ ಆಗಂಬೆ ಘಾಟಿಯ 7ನೇ ತಿರುವು ಸಂಪೂರ್ಣ ಕುಸಿದಿದ್ದು ಸಂಚಾರ ಬಂದ್‌ ಆಗಿತ್ತು. ಈ ಪ್ರದೇಶಕ್ಕೆ ಕೇವಲ ಮರಳು ಚೀಲಗಳನ್ನು ಅಳವಡಿಸಿ ತಾತ್ಕಲಿಕ ದುರಸ್ತಿ ಮಾಡಿದ್ದು ಇದೇ ರೀತಿ ಮಳೆ ಸುರಿಯುತ್ತಿದ್ದರೆ ಮಣ್ಣು ಸಿಂಕ್‌ ಆಗಿ ಮತ್ತೆ ತಾತ್ಕಲಿಕ ತಡೆಗೋಡಯೂ ಕುಸಿಯುವ ಭೀತಿಯಲ್ಲಿದೆ.
Advertisement

Udayavani is now on Telegram. Click here to join our channel and stay updated with the latest news.

Next