Advertisement
ದುರಸ್ತಿಗೊಳಿಸುವ ಪ್ರದೇಶದಲ್ಲಿ ಹಲವಾರು ಬೃಹತ್ ಮರಗಳಿದ್ದು ಅವುಗಳನ್ನು ತೆರೆವುಗೊಳಿಸಲು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಮಾ. 19ರಂದು ಕಾಮಗಾರಿ ಆರಂಭಿಸಲು ಸೂಚಿಸಲಾಗಿತ್ತು. ಅರಣ್ಯ ಇಲಾಖೆಯ ಆಕ್ಷೇಪದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಮಳೆಗಾಲ ಆರಂಭವಾದರೆ ಮತ್ತೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಯಾವುದೇ ಮರಗಳನ್ನು ತೆಗೆಯದೇ ದುರಸ್ತಿ ಕಾಮಗಾರಿ ಮಾಡಬೇಕು ಎಂಬ ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿಗಳು ಷರತ್ತು ವಿಧಿಸಿದ್ದಾರೆ.
ಪ್ರಯಾಣಿಕರು ಕುಂದಾಪುರ – ಬಾಳೇಬರೆ (ಹುಲಿಕಲ್) ಘಾಟಿ ಅಥವಾ ಶೃಂಗೇರಿ – ತೀರ್ಥಹಳ್ಳಿ ಕುದುರೆಮುಖ ಘಾಟಿ ಮೂಲಕ ಸಂಚರಿಸಬಹುದಾಗಿದೆ. ಚುನಾವಣೆಗೆ ದಿನ ಅವಕಾಶ ನೀಡಿ
ಉಡುಪಿ, ದ.ಕ., ಜಿಲ್ಲೆಗಳಲ್ಲಿ ಎ. 18ರಂದು ಹಾಗೂ ಶಿವಮೊಗ್ಗದಲ್ಲಿ ಎ. 23ರಂದು ನಡೆಯುವುದರಿಂದ ಮಲೆನಾಡು ಹಾಗೂ ಕರಾವಳಿ ನಡುವೆ ಸಂಚರಿಸುವ ಮತದಾರರಿಗೆ ತೊಂದರೆಯಾಗದಂತೆ ಈ ಎರಡು ದಿನ ಘಾಟಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರು ವಿನಂತಿಸಿದ್ದಾರೆ.