Advertisement

ಆಗುಂಬೆ ಘಾಟಿ ಬಂದ್‌: ಬಿಕೋ ಎನ್ನುತ್ತಿದೆ ಸೋಮೇಶ್ವರ ಪೇಟೆ

10:31 PM May 03, 2019 | Sriram |

ಹೆಬ್ರಿ: ಕಳೆದ ವರ್ಷ ಮಳೆಗಾಲದಲ್ಲಿ ಆಗುಂಬೆ ಘಾಟಿಯ 14 ಮತ್ತು 7ನೇ ಸುತ್ತು ಕುಸಿತಗೊಂಡ ಕಾರಣ ದುರಸ್ತಿ ಹಿನ್ನಲೆಯಲ್ಲಿ ಎ.1ರಿಂದ ಘಾಟಿ ಬಂದ್‌ ಆದ ಪರಿಣಾಮ ಪ್ರವಾಸಿಗರನ್ನೆ ನಂಬಿ ವ್ಯಾಪಾರ ಮಾಡುತ್ತಿದ್ದ ಸೋಮೇಶ್ವರ ಪೇಟೆ ಈಗ ಜನರಿಲ್ಲದೆ ಬಿಕೋ ಎನ್ನುತ್ತಿದೆ.

Advertisement

ಸೋಮೇಶ್ವರ, ಸೀತಾನದಿ ಹಾಗೂ ಆಗುಂಬೆಯ ಹೊಟೇಲ್‌ ಅಂಗಡಿಗಳು ವ್ಯಾಪಾರ ವಹಿವಾಟನ್ನು ಬಂದ್‌ ಮಾಡಿದ್ದು ಸಂಕಷ್ಟದಲ್ಲಿದ್ದಾರೆ. ಇತ್ತ ಒಂದೆಡೆ ಹೋಟೆನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೆಲಸವಿಲ್ಲದೆ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಅದರಲ್ಲೂ ಎಪ್ರಿಲ್‌, ಮೇ ತಿಂಗಳಲ್ಲಿ ಪ್ರವಾಸಿಗರಿಂದಾಗಿ ವ್ಯಾಪಾರ ಹೆಚ್ಚು. ಆದರೆ ಅದೇ ತಿಂಗಳಲ್ಲಿ ತಿಂಗಳಲ್ಲಿ ಘಾಟಿ ಬಂದ್‌ ಮಾಡಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ಹೊಟೇಲ್‌ ಅಂಗಡಿ ಮಾಲಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಹೆಬ್ರಿಯಲ್ಲೂ ವ್ಯಾಪಾರವಿಲ್ಲ
ತಾಲೂಕು ಕೇಂದ್ರವಾದ ಹೆಬ್ರಿಯಲ್ಲೂ ವ್ಯಾಪಾರ ಕುಸಿದಿದೆ. ಆಗುಂಬೆ ಘಾಟಿ ಮೂಲಕ ತೀರ್ಥಹಳ್ಳಿಯಿಂದ ಹೆಬ್ರಿಗೆ ಬಂದು ಧರ್ಮಸ್ಥಳ ಕುಂದಾಪುರ ಹೋಗುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದರಿಂದ ಈ ಭಾಗದ ವ್ಯಾಪಾರಸ್ಥರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಆಮೆಗತಿಯ ಕಾಮಗಾರಿ
ಎ.1ರಿಂದ ಒಂದು ತಿಂಗಳು ಘಾಟಿ ಬಂದ್‌ ಮಾಡಿ ಕಾಮಗಾರಿ ಮಾಡಲಾಗುವುದು ಎಂದು ಹೇಳಿದ ಇಲಾಖೆ ಘಾಟಿ ಬಂದ್‌ ಆಗಿ ಒಂದು ತಿಂಗಳಾದರೂ ಕುಸಿತಗೊಂಡ ಸ್ಥಳದ ಕಾಮಗಾರಿ ಇನ್ನೂ ಆರಂಭ ಮಾಡಿಲ್ಲ. ಈಗ ಮತ್ತೆ 15 ದಿನ ಕಾಲಾವಕಾಶ ಕೇಳಿದ್ದು ಒಂದು ತಿಂಗಳಲ್ಲಿ ಮುಗಿಯದ ಕಾಮಗಾರಿ 15 ದಿನಕ್ಕೆ ಮುಗಿಯುವುದೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಘಾಟಿ ಬಂದ್‌ ಆಗಿರುವುದರಿಂದ ಎ.1ರಿಂದ ಹೋಟೆಲ್‌ ಬಂದ್‌ ಮಾಡಿದ್ದೇವೆ. ಹಲವಾರು ವರುಷಗಳಿಂದ ಕೆಲಸಗಾರರು ಹೋಟೆಲ್‌ ಬಂದ್‌ನಿಂದ ಕೆಲಸಬಿಟ್ಟಿದ್ದಾರೆ. ಹೀಗೆ ಆದರೆ ವ್ಯಾಪಾರಸ್ಥರು ಉದ್ಯಮ ಮುಂದುವರಿಸುವುದು ಹೇಗೆಂಬ ಚಿಂತೆ ಕಾಡಿದೆ.
-ಪುರಂದರ ಹೇರಳೆ,ಹೊಟೇಲ್‌ ಉದ್ಯಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next