ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧವನ್ನು ಆ. 30ರ ವರೆಗೆ ಮುಂದುವರಿಸಲಾಗಿದೆ.
ಮಿನಿ ಬಸ್ ಹಾಗೂ ಲಘು ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ.
ಘಾಟಿಯ 11ನೇ ತಿರುವಿನಲ್ಲಿ ಭೂ ಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಜು. 30ರ ವರೆಗೆ ಭಾರೀ ವಾಹನಗಳ ಸಂಚಾರ ಓಡಾಟವನ್ನು ನಿಷೇಧಿಸಲಾಗಿತ್ತು.
ಭೂ ಕುಸಿತ ಪರಿಣಾಮ ಬಿದ್ದು ಹೋಗಿರುವ ರಾ. ಹೆ. ಪ್ರಾಧಿಕಾರವು ಗಾರ್ಡ್‌ವಾಲ್‌ನ ಮರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ತಾತ್ಕಾಲಿಕ ದುರಸ್ತಿ ಕಾರ್ಯ ಮುಂದುವರಿದಿದೆ.
ಕಾಮಗಾರಿ ಸಂಪೂರ್ಣ ಮುಗಿಯಲು ಎರಡು ವಾರಗಳ ಕಾಲಾವಕಾಶ ಅಗತ್ಯವಾಗಿದ್ದು, ಮಳೆ ಬರುತ್ತಿರುವುದರಿಂದ ಭೂ ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಮಿನಿ ಬಸ್, ಲಘು ವಾಹನಗಳನ್ನು ಹೊರತುಪಡಿಸಿ ಆ.30ರ ವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಆದೇಶ ಹೊರಡಿಸಿದ್ದಾರೆ.