Advertisement

Agumbe: ಮಳೆಗಾಲ ಆರಂಭವಾದರೂ ಘನ ವಾಹನ ಸಂಚಾರ ನಿಷೇಧವಾಗಿಲ್ಲ; ಜಿಲ್ಲಾಡಳಿತಕ್ಕೆ ಮರೆವು!

11:51 PM Jun 05, 2024 | Team Udayavani |

ಹೆಬ್ರಿ: ಕರಾವಳಿ – ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತೀ ಮಳೆಗಾಲ ಆರಂಭವಾಗುತ್ತಿದ್ದಂತೆ ಘನವಾಹನ ಸಂಚಾರಕ್ಕೆ ನಿಷೇಧ ಹೇರಲಾಗುತ್ತದೆ. ಆದರೆ ಈ ವರ್ಷ ಮಳೆಗಾಲ ಆರಂಭವಾದರೂ ಜಿಲ್ಲಾಡಳಿತ ಘನವಾಹನ ಸಂಚಾರ ನಿಷೇಧಿಸಿಲ್ಲ. ಇದರಿಂದಾಗಿ ನಿತ್ಯ ಪ್ರಯಾಣಿಕರಲ್ಲಿ ಆತಂಕ ಮೂಡಿದೆ.

Advertisement

ಘಾಟಿಯ ಇಕ್ಕೆಲಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಇದೇ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸುವುದರಿಂದ ತಿರುವುಗಳಲ್ಲಿ, ತಡೆಗೋಡೆ ಬಳಿ ಕುಸಿತ ಆಗುವ ಭೀತಿ ಇದೆ. ಘಾಟಿಯ ಅರ್ಧ ಭಾಗ ಶಿವಮೊಗ್ಗ ಜಿಲ್ಲೆ ಹಾಗೂ ಇನ್ನರ್ಧ ಭಾಗ ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಹಲವಾರು ಬಾರಿ ಭಾರೀ ಮಳೆಯ ನಡುವೆ ಘನ ವಾಹನ ಸಂಚಾರದಿಂದ ಘಾಟಿ ಕುಸಿತಗೊಂಡು ತಿಂಗಳುಗಳ ಕಾಲ ವಾಹನ ಸಂಚಾರ ಬಂದ್‌ ಆಗಿತ್ತು. ಆದರೂ ಘನವಾಹನ ಸಂಚಾರ ನಿಷೇಧ ಮಾಡದಿರುವುದು ಉಭಯ ಜಿಲ್ಲಾಡಳಿತಗಳ ನಿರ್ಲಕ್ಷ್ಯ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್‌ ಶೆಟ್ಟಿ ನಾಡಪಾಲ್‌ ತಿಳಿಸಿದ್ದಾರೆ.

ತಡೆಗೋಡೆ ಬಳಿ ದುರಸ್ತಿ
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 14ನೇ ತಿರುವಿನ ಸೂರ್ಯಾಸ್ತ ವೀಕ್ಷಣೆ ಸ್ಥಳದ ಬಳಿ ಹಾಗೂ ಘಾಟಿ ಆರಂಭದ ಮಧ್ಯೆ ತಡೆಗೋಡೆಯಲ್ಲಿ ಬಿರುಕು ಬಂದಿದ್ದು ಘನ ವಾಹನ ಸಂಚರಿಸಿದರೆ ಸಂಪೂರ್ಣ ಕುಸಿಯುವ ಅಪಾಯ ಇರುವುದಾಗಿ ಉದಯವಾಣಿ ಸಚಿತ್ರ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಇಲಾಖೆಯು ತಡೆಗೋಡೆಯ ಬಳಿ ಕಾಂಕ್ರೀಟ್‌ ಬಳಸಿ ತಾತ್ಕಾಲಿಕ ದುರಸ್ತಿ ಹಾಗೂ ವಾಹನಗಳು ಢಿಕ್ಕಿ ಹೊಡೆದು ಹಾನಿಗೀಡಾದ ಸ್ಥಳಗಳಲ್ಲಿ ದುರಸ್ತಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next