Advertisement
ವಿರೂಪಾಕ್ಷಾಚಾರ್ ತಾಲೂಕಿನ ನಾಗತೀಹಳ್ಳಿ ಗ್ರಾಮದವರಾಗಿದ್ದು, 4 ಎಕರೆ 10 ಕುಂಟೆ ಜಮೀನಿನಲ್ಲಿ ಸಾವಯವ ಕೃಷಿಯೊಂದಿಗೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ರಾಗಿ, ಜೋಳದ ಜೊತೆ ಆಹಾರ ಬೆಳೆಗಳು ತೋಟಗಾರಿಕಾ ಬೆಳೆ ಹಣ್ಣುಗಳ ಜೊತೆ ಡ್ರ್ಯಾಗನ್ ಫ್ರೂಟ್, ಏಲಕ್ಕಿ ಬೆಳೆ, ಬಾಳೆ, ವೀಲ್ಯೆದೆಲೆ, ಮೆಣಸು, ಮಾವು, ತೆಂಗು, ಸಪೋಟ, ಬೆಣ್ಣೆಹಣ್ಣು, ಅಂಜೂರ, ಲವಂಗ, ಚಕ್ಕೆ, ಸೀತಾಫಲ, ಪನ್ನೇರಳೆ, ರಾಮಫಲ, ಗಸಗಸೆ, ಜಾಯಿಕಾಯಿ, ಕೋಕೊ, ಕರಿಬೇವು, ಸೀಬೆ, ನಿಂಬೆ, ದಾಳಿಂಬೆ, ಮೂಸುಂಬಿ, ಕಿತ್ತಳೆ, ಬೋರೆಹಣ್ಣು, ಪರಂಗಿ, ಮರಸೇಬು, ಸೇಬು, ಶ್ರೀಗಂಧ ಸೇರಿದಂತೆ ನೂರಕ್ಕೂ ಹೆಚ್ಚು ತಳಿಯ ಸಾವಿರಕ್ಕೂ ಹೆಚ್ಚು ಮರಗಿಡಗಳನ್ನು ಬೆಳೆದು ಸಾವಯವ ಕೃಷಿಯಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ.
Related Articles
Advertisement
ವಾರ್ಷಿಕ 10 ಲಕ್ಷಕ್ಕೂ ಹೆಚ್ಚು ಲಾಭ:
ವಿರೂಪಾಕ್ಷಪ್ಪನವರು ತಮ್ಮ ತೋಟದಲ್ಲಿ ವಾರ್ಷಿಕ ಹತ್ತು ಲಕ್ಷ ಆದಾಯ ಗಳಿಸುತ್ತಿದ್ದಾರೆ. ತಮ್ಮ ಮನೆ ಮಂದಿಯೇ ಹೆಚ್ಚು ತೋಟದಲ್ಲಿ ತೊಡಗಿಸಿಕೊಳ್ಳುವುದರಿಂದ ಕೆಲಸದಾಳು ಕೊರತೆಯನ್ನೂ ನೀಗಿಸಿಕೊಂಡಿದ್ದಾರೆ. ಬೆಳಗ್ಗೆ 6 ಗಂಟೆಗೆ ತೋಟಕ್ಕಿಳಿಯುವ ತಮ್ಮ ಮಕ್ಕಳು, ಪತ್ನಿ ಬೆಳಗ್ಗೆ 9 ಗಂಟೆಯವರಿಗೂ ತೋಟದಲ್ಲೇ ಕೆಲಸ ಮಾಡುತ್ತಾರೆ. ತಮಗೆ ಸಿಗುವ ಆದಾಯದ ಜತೆಗೆ ಪ್ರಕೃತಿಗೆ ಆಮ್ಲಜನಕವನ್ನು ಒದಗಿಸುವ ಸಂತೃಪ್ಪಿ ನಮಗಿದೆ ಎಂದು ವಿರೂಪಾಕ್ಷಪ್ಪ ಉದಯವಾಣಿಗೆ ತಿಳಿಸಿದ್ದಾರೆ. ಇವರು ಕಳೆದ ವರ್ಷ ತಾಲೂಕಿನ ಗಡಿಗ್ರಾಮ ಚೌಡಗೋನಹಳ್ಳಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯೊಂದಿಗೆ ರೈತ ಸಂವಾದದಲ್ಲಿಯೂ ಭಾಗಿಯಾಗಿದ್ದರು.
ನನ್ನ ತಾಲೂಕಿನ ರೈತನೋರ್ವ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರÂ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಕಚೇರಿಯ ಆಹ್ವಾನದ ಮೇರೆಗೆ ಭಾಗವಹಿಸುತ್ತಿರುವುದು ಸಂತಸ ತಂದಿದೆ. ನಾನು ಕೃಷಿ ಸಚಿವನಾದ ನಂತರ ಮೊದಲು ಅವರ ತೋಟಕ್ಕೆ ಭೇಟಿ ನೀಡಿ ಸಂತಸ ಪಟ್ಟಿದ್ದೆ, ನನ್ನ ಹೆಸರಿನಲ್ಲಿ ಒಂದು ಗಿಡವನ್ನು ವಿರೂಪಾಕ್ಷಪ್ಪ ನೆಡಿಸಿದ್ದರು. ಬಯಲುಸೀಮೆಯಲ್ಲು ಏಲಕ್ಕಿ ಸೇರಿದಂತೆ ನೂರಾರು ತಳಿಯ ಗಿಡಮರಗಳನ್ನು ಬೆಳೆದಿರುವುದನ್ನು ನೋಡಿದಾಗ ವಿರೂಪಾಕ್ಷಮೂರ್ತಿಯವರ ಶ್ರಮ ಮತ್ತು ಕೃಷಿಯ ಬಗ್ಗೆ ಅವರಿಗಿದ್ದ ಕಾಳಜಿಗೆ ಹೆಮ್ಮೆ ಎನಿಸಿತು. ಇವರು ಇತರ ರೈತರಿಗೂ ಮಾದರಿ.-ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ, ಕರ್ನಾಟಕ ಸರ್ಕಾರ
ಸಾವಯವ ಕೃಷಿಕ ವಿರೂಪಾಕ್ಷಾಚಾರ್ ಅವರಿಗೆ ಪ್ರಧಾನಮಂತ್ರಿ ಕಾರ್ಯಾ ಲಯದಿಂದ ವಿಶೇಷವಾಗಿ ಬಂದಿರುವ ಈ ಆಹ್ವಾನ ನಮ್ಮ ಜಿಲ್ಲೆಗೆ ರಾಜ್ಯಕ್ಕೆ ಸಂತಸ ತಂದಿದೆ.-ಡಾ.ಕುಮಾರ್, ಜಿಲ್ಲಾಧಿಕಾರಿ
-ಪಿ.ಜೆ.ಜಯರಾಂ