Advertisement
ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಶನಿವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, “ಬೆಂಗಳೂರು ದೇಶದ ಸಾಫ್ಟ್ವೇರ್‌ಗಳ ರಾಜಧಾನಿ ಯಾಗಿದೆ. ಆದರೆ, ಕೃಷಿ ವಿಜ್ಞಾನ ಮತ್ತು ಮೀನುಗಾರಿಕೆ ವಿಜ್ಞಾನದ ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ನಾವು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಚೌಕಟ್ಟು ರೂಪಿಸಿ, ಆ ಮೂಲಕ ಐಟಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು’ ಎಂದು ಹೇಳಿದರು.
Related Articles
Advertisement
“ಉದಯವಾಣಿ’ಯೊಂದಿಗೆಖುಷಿ ಹಂಚಿಕೊಂಡ ಸಾಧಕರು :
ಚಿನ್ನದ ಹುಡುಗಿ ಶೀಲಾ :
ಬಿಎಸ್ಸಿ (ಕೃಷಿ)ಯಲ್ಲಿ ಒಂಬತ್ತು ಚಿನ್ನದ ಪದಕಗಳನ್ನು ಗಳಿಸಿದ ಹಾಸನದ ಆರ್. ರಾಹುಲ್ ಗೌಡ, ಡಾಕ್ಟರ್ ಆಗಬೇಕೆಂಬ ಕನಸುಕಂಡಿದ್ದರು. ಆದರೆ, ಸೀಟು ಸಿಗದಕಾರಣ ಬಿಎಸ್ಸಿ (ಕೃಷಿ) ಆಯ್ಕೆ ಮಾಡಿಕೊಂಡಿದ್ದಾರೆ. “ನನ್ನ ಆಯ್ಕೆ ಮತ್ತು ಸಾಧನೆ ತೃಪ್ತಿ ತಂದಿದೆ. ಜೀವವೈವಿಧ್ಯ ವಿಷಯದ ಮೇಲೆ ಆಸಕ್ತಿ ಇದ್ದು, ಇದುಕೃಷಿಯ ಭಾಗವೂ ಆಗಿದೆ. ಆದ್ದರಿಂದ ಭಾರತೀಯ ಅರಣ್ಯ ಸೇವೆ ಅಥವಾ ನಾಗರಿಕ ಸೇವೆ ಬಯಕೆ ಇದೆ. ಈಗಾಗಲೇ ಯುಪಿಎಸ್ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದೇನೆ’ ಎಂದರು.
ಕೃಷಿಯಲ್ಲೇ ನನ್ನಭವಿಷ್ಯವೂ… : ಬಿಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)ಯಲ್ಲಿ ಏಳು ಚಿನ್ನದ ಪದಕಗಳನ್ನು ಗಳಿಸಿದ ಪಿ.ಹಂಸಕೂಡ ಭವಿಷ್ಯದಲ್ಲಿಕೃಷಿ ಮತ್ತು ಸಹಕಾರಕ್ಷೇತ್ರದಲ್ಲಿಕಾರ್ಯನಿರ್ವಹಿಸುವ ಗುರಿ ಇದೆ. ಈ ಮೂಲಕ ನಾವು ಕಲಿತದ್ದು ರೈತರ ಜಮೀನು ತಲುಪ ಬೇಕು. ಇದರೊಂದಿಗೆ ಸೇವೆ ಮಾಡುವ ಗುರಿ ಹೊಂದಿದ್ದಾರೆ. “ಡಾಕ್ಟರ್ ಆಗುವ ಆಸೆ ಇತ್ತು. ಆದರೆ, ಸೀಟು ಸಿಗದಿದ್ದರಿಂದ ಬಿಎಸ್ಸಿ(ಕೃಷಿ) ಆಯ್ಕೆ ಮಾಡಿಕೊಂಡೆ. ಈಗ ಇದು ಫೆವರಿಟ್ ಆಗಿದೆ. ದೇಶದ ಭವಿಷ್ಯಕೃಷಿ ಮೇಲೆ ನಿಂತಿದೆ. ಸಹಜವಾಗಿ ಅದರಲ್ಲಿ ನನ್ನ ಭವಿಷ್ಯವನ್ನೂ ರೂಪಿಸಿಕೊಳ್ಳುವ ಕನಸು ಹೊಂದಿ ದ್ದೇನೆ. ನನ್ನ ಗುರಿ ಸಾಧನೆಗೆ ಪೋಷಕರ ಬೆಂಬಲ ಇದೆ’ ಎಂದರು.
ಬೇಸಾಯ ಮಾಡುವ ಗುರಿ ಹೊಂದಿದ್ದೇನೆ : “ನನಗೆ ಯಾರ ಹಂಗಿನಲ್ಲೂ ಕೆಲಸ ಮಾಡಲು ಇಷ್ಟವಿಲ್ಲ. ಸ್ವಾವಲಂಬಿ ಹಾಗೂ ನೆಮ್ಮದಿಯ ಬದುಕುಕಟ್ಟಿಕೊಳ್ಳುವ ಆಸೆ ಇದೆ. ಇದು ಕೃಷಿಯಿಂದ ಮಾತ್ರ ಸಾಧ್ಯ ಎಂದು ನಾನು ನಂಬಿದ್ದೇನೆ. ಹಾಗಾಗಿ, ಓದು ಮುಗಿದ ಮೇಲೆಊರಿನಲ್ಲಿ ಬೇಸಾಯ ಮಾಡುವ ಗುರಿ ಹೊಂದಿದ್ದೇನೆ’. – ಚಿನ್ನದ ಹುಡುಗ ಶರತ್‌ಕೊತಾರಿಯಕನಸು ಇದು. 2018-19ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಶರತ್‌ಕೊತಾರಿ ಬಿಎಸ್ಸಿ (ಕೃಷಿ)ಯಲ್ಲಿ ಅತಿ ಹೆಚ್ಚು11 ಚಿನ್ನದ ಪದಕಗಳ ಜತೆಗೆ ಎರಡು ದಾನಿಗಳ ಚಿನ್ನದ ಪ್ರಮಾಣಪತ್ರ ಬಾಚಿಕೊಂಡಿದ್ದಾರೆ. ಶನಿವಾರ ಬೆಂಗಳೂರುಕೃಷಿ ವಿಶ್ವವಿದ್ಯಾಲಯದ54ನೇ ಘಟಿಕೋತ್ಸವದಲ್ಲಿ ಪದಕಗಳನ್ನು ಸ್ವೀಕರಿಸಿ ಎಲ್ಲರ ಗಮನಸೆಳೆದರು. ಈ ವೇಳೆ “ಉದಯವಾಣಿ’ಯೊಂದಿಗೆ ಖುಷಿ ಕ್ಷಣಗಳನ್ನು ಹಂಚಿಕೊಂಡರು. “ಕೃಷಿಯಲ್ಲಿ ಲಾಭವಿಲ್ಲ ಎಂಬುದರಲ್ಲಿ ಹುರುಳಿಲ್ಲ. ವೈಜ್ಞಾನಿಕ ಮತ್ತು ವ್ಯವಸ್ಥಿತವಾಗಿ ನಿರ್ವಹಿಸಿದರೆ, ಖಂಡಿತ ಹೆಚ್ಚು ಲಾಭ ಗಳಿಸಬಹುದು.3-4 ವರ್ಷಗಳಲ್ಲಿ ನನ್ನ ಓದು ಮುಗಿಸಿ, 4-5 ಎಕರೆ ಭೂಮಿ ತೆಗೆದುಕೊಂಡುಕೃಷಿ ಮಾಡುವ ಗುರಿ ಇದೆ’ ಎಂದು ಶರತ್‌ಕೊತಾರಿ ತಿಳಿಸಿದರು.
ಇಷ್ಟೊಂದು ಪದಕ ಪಡೆದಿದ್ದೀರಿ. ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳ ಬಾಗಿಲು ತೆರೆಯಲಿವೆ. ಯಾಕೆ ಕೃಷಿಯಲ್ಲೇ ಆಸಕ್ತಿ ಎಂದು ಕೇಳಿದಾಗ, “ಬೇರೊಬ್ಬರ ಕೈಕೆಳಗೆ ಕೆಲಸ ಮಾಡಲು ನನಗೆ ಇಷ್ಟವಿಲ್ಲ. ಹಾಗೂ ನೆಮ್ಮದಿ ಬದುಕು ನನಗೆ ಮುಖ್ಯ. ಅಷ್ಟಕ್ಕೂ ಮೂಲತಃ ನಮ್ಮದುಕೃಷಿ ಕುಟುಂಬ. ಶಿರಸಿಯ ಹೊನ್ನೆಹಕ್ಕಲು ಗ್ರಾಮದಲ್ಲಿ ಒಂದು ಎಕರೆ ಜಮೀನು ಇದೆ. ಅದರಲ್ಲಿ ಅಪ್ಪ ವ್ಯವಸಾಯ ಮಾಡುತ್ತಿದ್ದಾರೆ. ಓದು ಮುಗಿದ ಮೇಲೆ ನಾನೂ ಸಮಗ್ರ ಮತ್ತು ಸಂರಕ್ಷಿತಕೃಷಿ ಮಾಡುವ ಬಯಕೆ ಇದೆ’ ಎಂದರು