Advertisement
ಕೃಷಿಸಂಬಂಧಿಸಿದ ಸಮಸ್ಯೆಗಳಿದ್ದರೆವಿಚಾರಮುಟ್ಟಿಸಿದರೆ ಸಾಕು, ಆ ತಕ್ಷಣದಲ್ಲೇ ರೈತರ ಜಮೀನಿನಲ್ಲಿಹಾಜರಿರುತ್ತಾರೆ. ಬೆಳೆಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಅನ್ನದಾತರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಎಚ್.ಡಿ.ಕೋಟೆಯಲ್ಲಿ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿರುವ ಡಾ| ವೆಂಕಟೇಶ್ ರೈತ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Related Articles
Advertisement
ಕೆಲಸ ಮಾಡಿ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಜನರ ಸಂಪರ್ಕವಿಲ್ಲದಂತೆ ಕಾರ್ಯನಿರ್ವಹಿಸುತ್ತಿರುತ್ತಾರೆ. ತಳಮಟ್ಟದಲ್ಲಿ ಸಮಸ್ಯೆಗಳನ್ನು ಆಲಿಸುವ ಗೋಜಿಗೆ ಹೋಗುವುದಿಲ್ಲ. ಆದರೆ, ಡಾ| ವೆಂಕಟೇಶ್ ಅವರು ಇದಕ್ಕೆ ಅಪವಾದ ಎಂಬಂತೆ ತಮ್ಮ ಕರ್ತವ್ಯದ ಅವಧಿಯಲ್ಲಿ ಬಹುತೇಕ ಸಮಯವನ್ನು ಕ್ಷೇತ್ರ ಸುತ್ತಾಟಕ್ಕಾಗಿ ಮೀಸಲಿಟ್ಟಿದ್ದಾರೆ.
ತಾಲೂಕಿನ ಯಾವ ಮೂಲೆಯಲ್ಲಿ ಸಮಸ್ಯೆ ಬಂದರೂ ಸ್ಪಂದಿಸುವೆ : ರೈತರು ದೇಶದ ಬೆನ್ನೆಲುಬು. ಅವರು ಬೆಳೆಯುವ ಬೆಳೆಗಳಿಗೆ ಪೂರಕವಾಗಿ ಕೃಷಿ ಇಲಾಖೆ ಸಹಕಾರ ನೀಡಬೇಕು. ಸರ್ಕಾರ ನಮಗೆ ಪ್ರತಿ ತಿಂಗಳು ವೇತನ ನೀಡುವುದು ಐಷಾರಾಮಿಕೊಠಡಿಯಲ್ಲಿಕೂತು ಸಮಯ ವ್ಯಯ ಮಾಡುವುದಕ್ಕಲ್ಲ. ರೈತರ ಸಮಸ್ಯೆ ಆಲಿಸಬೇಕು, ಪರಿಹಾರಿಸುವ ನಿಟ್ಟಿನಲ್ಲಿಕಾರ್ಯನಿರ್ವಹಿಸಿದಾಗ ಮಾತ್ರಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಕ್ಕೆ ಸಾರ್ಥಕವಾಗುತ್ತದೆ ಅನ್ನುವುದು ನನ್ನ ಭಾವನೆ. ಹೀಗಾಗಿ ತಾಲೂಕಿನ ಯಾವುದೇ ಮೂಲೆಯಲ್ಲಿ ರೈತರ ಸಮಸ್ಯೆಕೇಳಿ ಬಂದರೂ ಸಮಸ್ಯೆ ಅದಕ್ಕೆ ಪರಿಹರಿಸುವ ನಿಟ್ಟಿನಲ್ಲಿ ನಾನುಕಾರ್ಯನಿರ್ವಹಿಸುತ್ತೇನೆ ಎಂದು ಕೃಷಿ ಇಲಾಖೆ ಸಹಾಯಕ ಅಧಿಕಾರಿ ಡಾ| ವೆಂಕಟೇಶ್ ತಿಳಿಸಿದ್ದಾರೆ.
ಹೊಲದಲ್ಲಿ ಬೆಳೆ ಸಮಸ್ಯೆ ಇದೆಯಾ? ಕರೆ ಮಾಡಿ : ಕೃಷಿ ಸಹಾಯಕ ಅಧಿಕಾರಿ ಡಾ| ವೆಂಕಟೇಶ್ ತಾಲೂಕಿಗೆ ಆಗಮಿಸಿರುವುದು ರೈತರಿಗೆ ಒಂದುರೀತಿಯಲ್ಲಿ ವರದಾನವಾಗಿದೆ. ಜಮೀನುಗಳಿಗೆಭೇಟಿ ನೀಡುವಂತಹ ಅಧಿಕಾರಿಗಳು ಎಂದರೆ ಈ ಭಾಗದ ರೈತರಿಗೆ ಅಚ್ಚುಮೆಚ್ಚು. ಸಮಸ್ಯೆಯಲ್ಲಿ ಸಿಲುಕಿರುವ ರೈತರ ಬೆಳೆಗೆ ಸಂಬಂಧಿಸಿದ ಪರಿಹಾರಕ್ಕೆ ತಾವೇ ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿಗೆ ಅಗತ್ಯವಾಗಿ ಬೇಕಾದ ಸಲಹೆಗಳನ್ನು ನೀಡುತ್ತಿದ್ದಾರೆ. ಅಗತ್ಯವಿದ್ದಾಗ ತಿಂಗಳಲ್ಲಿ ಒಂದೆರಡು ದಿನಮಾತ್ರಕಚೇರಿಯಲ್ಲಿಕರ್ತವ್ಯ ನಿರ್ವಹಿಸುವ ಇವರ ತಮ್ಮ ಬಹುತೇಕ ಸಮಯವನ್ನುಕ್ಷೇತ್ರ ಸುತ್ತಾಟಕ್ಕಾಗಿ ಮೀಸಲಿಟ್ಟಿದ್ದಾರೆ. ತಾಲೂಕಿನಕಲ್ಲಿ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಡಾ| ವೆಂಕಟೇಶ್ ಮೊಬೈಲ್ ಸಂಖ್ಯೆ 8277933117 ಸಂಪರ್ಕಿಸಬಹುದು.
ಇಂತಹ ಅಧಿಕಾರಿ ಹಿಂದೆಂದೂ ಸಿಕ್ಕಿರಲಿಲ್ಲ : ನಮ್ಮ ತಾಲೂಕಿನಲ್ಲಿ ಡಾ. ವೆಂಕಟೇಶ್‌ಕೃಷಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಖುಷಿ ತಂದಿದೆ. ಇಲ್ಲಿಯ ತನಕ ಎಷ್ಟೋ ಅಧಿಕಾರಿಗಳುಕೃಷಿ ಇಲಾಖೆಗೆ ಬಂದು ಹೋದರೂ ಡಾ.ವೆಂಕಟೇಶ್ ಅವರಂತೆ ಕರ್ತವ್ಯ ನಿರ್ವಹಿಸಿಲ್ಲ. ಸಮಸ್ಯೆ ಹೇಳಿಕೊಂಡ ರೈತರ ಜಮೀನನಲ್ಲಿಕ್ಷಣ ಮಾತ್ರದಲ್ಲಿ ಭೇಟಿ ನೀಡಿ ಅಹವಾಲು ಆಲಿಸಿ ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡುವ ಇಂತಹ ಅಧಿಕಾರಿಗಳು ಸಿಗುವುದು ಅಪರೂಪ. ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆಕೃಷಿ ಸಂಕಷ್ಟಗಳಿಗೆ ಸ್ವಂದಿಸುವ ಗುಣ ಇದೆ ಎಂದು ಸಾವಯವ ಕೃಷಿ ಪ್ರಶಸ್ತಿ ಪರಸ್ಕೃತರಾದ ಮೈಲಾರ ಪುಟ್ಟಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
– ಎಚ್.ಬಿ.ಬಸವರಾಜು