Advertisement

ಬರಡು ಭೂಮಿಯಲ್ಲಿ  ಕೃಷಿಗೆ ಯೋಜನೆ ಅಗತ್ಯ: ಖಾದರ್‌

01:45 PM Feb 15, 2018 | Team Udayavani |

ಮಂಗಳೂರು: ಗ್ರಾಮೀಣ ಪ್ರದೇಶದ ಬರಡು ಭೂಮಿಯನ್ನು ಕೃಷಿಭೂಮಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರಕಾರ ಗ್ರಾಮ ಪಂಚಾಯತ್‌ಗಳ ಮೂಲಕ ಹೊಸ ಯೋಜನೆ ರೂಪಿಸಬೇಕಿದೆ. ಇಂತಹ ಕೃಷಿ ಕಾರ್ಯಗಳಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ತೊಡ ಗಿಸಿ ಕೊಂಡಾಗ ಯುವ ಜನಾಂಗ ಕೃಷಿ ಕುರಿತು ಜಾಗೃತಗೊಳ್ಳುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಅವರು ಹೇಳಿದರು. 

Advertisement

ಅವರು ಬುಧವಾರ ನಗರದ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಬೆಳೆದ ಅಕ್ಕಿಯಿಂದ ಅನುಷ್ಠಾನಗೊಳಿಸಲಾದ ಬಿಸಿಯೂಟ ಯೋಜನೆಗೆ ಚಾಲನೆ ನೀಡಿದರು.

ರೈತರ ಕಷ್ಟಗಳನ್ನು ಅರಿಯುವುದು ಹಾಗೂ ಸಂಸ್ಕೃತಿಯನ್ನು ತಿಳಿಯುವ ಉದ್ದೇಶದಿಂದ ರಥಬೀದಿ ಕಾಲೇಜಿನ ವಿದ್ಯಾರ್ಥಿಗಳ ಪ್ರಯತ್ನ ಶ್ಲಾಘನೀಯ. ಇದಕ್ಕೆ ಸಹಕರಿಸಿದ ಪ್ರಾಂಶುಪಾಲರು, ಉಪನ್ಯಾಸಕರ ಪ್ರಯತ್ನ ಅಭಿನಂದನಾರ್ಹ ಎಂದರು. 

239 ಕೋ.ರೂ. ಮೀಸಲು
ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮಾತನಾಡಿ, ರಾಜ್ಯ ಸರಕಾರವು ಬಜೆಟ್‌ನಲ್ಲಿ ಶೇ. 30ರಷ್ಟನ್ನು ಶಿಕ್ಷಣಕ್ಕಾಗಿ ಮೀಸ ಲಿಡು ತ್ತಿದ್ದು, ಒಂದೂವರೆ ಲಕ್ಷ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್‌ ನೀಡುವುದ
ಕ್ಕಾಗಿ 239 ಕೋ.ರೂ. ಮೀಸಲಿಟ್ಟಿದೆ ಎಂದು ಹೇಳಿದರು.

ಶಾಸಕ ಜೆ.ಆರ್‌. ಲೋಬೊ ಮಾತ ನಾಡಿ, ನಾವೇ ಕಷ್ಟಪಟ್ಟು ದುಡಿದು ತಿನ್ನುವುದರಲ್ಲಿ ಹೆಚ್ಚು ತೃಪ್ತಿ ಸಿಗುತ್ತದೆ. ಜತೆಗೆ ವಿದ್ಯಾರ್ಥಿಗಳು ಗದ್ದೆಗೆ ಹೋಗಿ ದುಡಿದಾಗ ರೈತರ ಕಷ್ಟದ ಕುರಿತು ಕೂಡ ಅವರಿಗೆ ಅರಿವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳಿಗೆ ಕೆಎಂಸಿಯ ಆರೋಗ್ಯ ಕಾರ್ಡ್‌, ಸರಕಾರದ ಲ್ಯಾಪ್‌ಟಾಪ್‌ ಹಾಗೂ ಡಾ| ಪಿ. ದಯಾನಂದ ಪೈ ಪ್ರಾಯೋಜಿತ ಪ್ರೋತ್ಸಾಹಧನ ವಿತರಿಸಲಾಯಿತು. ಜತೆಗೆ ಅವರ ಹಡೀಲು ಗದ್ದೆಯ ಭತ್ತದ ನಾಟಿಯ ಕಿರುಚಿತ್ರ ಬಿಡುಗಡೆ ಗೊಳಿಸಲಾಯಿತು. 

Advertisement

ವೇದಿಕೆಯಲ್ಲಿ ಮಂಗಳೂರು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್‌ ವೇಣುಗೋಪಾಲ್‌, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜೆ.ಪಾಂಡುರಂಗ ನಾಯಕ್‌, ಪ್ರಾಧ್ಯಾಪಕಿ ಡಾ| ನಾಗವೇಣಿ ಮಂಚಿ, ಕೆಎಂಸಿಯ ಪಿಆರ್‌ಒ ರಾಕೇಶ್‌ ಮೊದಲಾದವರು ಉಪಸ್ಥಿತರಿದ್ದರು. 

ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌ ಸ್ವಾಗತಿಸಿ ದರು. ಪ್ರಾಧ್ಯಾಪಕ ನವೀನ್‌ ಕೋಣಾಜೆ ನಿರ್ವಹಿಸಿದರು.

ಗಂಜಿಯೂಟ ಸವಿದ ಖಾದರ್‌
ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆ ಬಡಿಸಿ ಬಳಿಕ ಸಚಿವ ಯು.ಟಿ. ಖಾದರ್‌ ಅವರು ವಿದ್ಯಾರ್ಥಿ ಗಳ ಜತೆಗೆ ಕೂತು ಚಟ್ನಿ ಯೊಂದಿಗೆ ಗಂಜಿಯೂಟ ಸವಿ ದರು. ಆರಂಭದಲ್ಲಿ ವಿದ್ಯಾರ್ಥಿ ಗಳ ಗದ್ದೆ ನಾಟಿ ಕಾರ್ಯಕ್ಕೂ ಖಾದರ್‌ ಅವರೇ ಚಾಲನೆ ನೀಡಿದ್ದು, ಇದೀಗ ಬಿಸಿಯೂಟ ಯೋಜನೆಗೂ ಅವರೇ ಚಾಲನೆ ನೀಡಿರುವುದು ವಿಶೇಷವಾಗಿತ್ತು.

ವಿದ್ಯಾರ್ಥಿಗಳೇ ಬೆಳೆದ ಅಕ್ಕಿ
ವಿದ್ಯಾರ್ಥಿಗಳು ಕೊಣಾಜೆಯ ಗದ್ದೆಯಲ್ಲಿ 8.5 ಕ್ವಿಂಟಾಲ್‌ ಅಕ್ಕಿ ಬೆಳೆದಿದ್ದು, ಸುಮಾರು 250 ವಿದ್ಯಾರ್ಥಿ ಗಳು ಬಿಸಿಯೂಟ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next